ಬಿಎಸ್‍ಪಿಯಿಂದ ಬಿರುಸಿನ ಚುನಾವಣಾ ಪ್ರಚಾರ…

45
firstsuddi

ಚಿಕ್ಕಮಗಳೂರು: ಮತದಾನಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಪ್ರಚಾರದ ಭರಾಟೆ ತೀವ್ರಗೊಂಡಿದ್ದು, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕೆ.ಬಿ. ಸುಧಾ ಅವರು ನಿನ್ನೆ ವಿವಿಧೆಡೆ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.

ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ತಾಲೂಕಿನ ಹುಕ್ಕುಂದ, ಇಂದಾವರ, ಹಿರೇಕೊಳಲೆ, ನಗರದ ಉಪ್ಪಳ್ಳಿ, ಶಾಂತಿನಗರ, ಕಲ್ಲುದೊಡ್ಡಿ, ವಿಜಯಪುರ, ಇಂದಿರಾಗಾಂಧಿ ಬಡಾವಣೆಗಳಲ್ಲಿ ಬೆಳಗಿನಿಂದ ಸಂಜೆವರೆಗೆ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.

ಭ್ರಷ್ಟಾಚಾರ ಮುಕ್ತ, ಪ್ರಾಮಾಣಿಕ, ಪಾರದರ್ಶಕ ಮತ್ತು ಸ್ವಚ್ಛ ಆಡಳಿತಕ್ಕಾಗಿ ಬಹುಜನ ಸಮಾಜ ಪಕ್ಷವನ್ನು ಬೆಂಬಲಿಸುವಂತೆ. ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆ ತರುವಂತೆ ಮತದಾರರಿಗೆ ಮನವಿ ಮಾಡಿದರು.

ತಮ್ಮನ್ನು ಚುನಾಯಿಸಿದಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ, ಪ್ರಾಮಾಣಿಕವಾಗಿ, ದುಡಿಯುವುದಾಗಿ ಭರವಸೆ ನೀಡಿದರು.

ಈ ವೇಳೆ ನಡೆದ ಬಹಿರಂಗ ಸಭೆಯಲ್ಲಿ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬಲವಾಗಿ ಬೀಸುತ್ತಿದ್ದು, ಬಹುಜನ ಸಮಾಜ ಪಕ್ಷದ ಗೆಲುವು ಖಚಿತ ಎಂದರು.

ಕ್ಷೇತ್ರದ ಅಭಿವೃದ್ಧಿಯಾಗಬೇಕಾದರೆ ಮತದಾರರು ಯಾವುದೇ ಆಮಿಷಗಳಿಗೆ ಬಲಿಯಾಗದೆ ಜಾತಿ, ಮತ, ಧರ್ಮಗಳನ್ನು ಪರಿಗಣಿಸದೆ ಮತ ನೀಡಬೇಕು ಎಂದು ಕಿವಿಮಾತು ಹೇಳಿದರು.

ಬಿಎಸ್‍ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಗಂಗಾಧರ್, ಅಸೆಂಬ್ಲಿ ಸಂಯೋಜಕಿ ಕೆ.ಎಸ್. ಮಂಜುಳಾ, ಮಾಜಿ ಅಧ್ಯಕ್ಷ ಕುಮಾರ್, ಪಕ್ಷದ ಮುಖಂಡರಾದ ಸಿದ್ದಯ್ಯ, ವಸಂತ, ಪುಷ್ಪ, ಸಾಕಮ್ಮ, ರೇಖಾ, ಚಂದ್ರಕಲಾ ಹಾಜರಿದ್ದರು.