ಬೆಂಗಳೂರು: ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ 5 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ದಾಸ್ತಾನು ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ದಕ್ಷಿಣ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನೇತೃತ್ವದಲ್ಲಿ ಆರೋಪಿ ಪುರುಷೋತ್ತಮ್ ಮನೆ ಮೇಲೆ ರೇಡ್ ಮಾಡಿ ಬಂಧಿಸಲಾಗಿದೆ. ಮನೆಯಲ್ಲಿದ್ದ ಮದ್ಯದ ಬಾಟಲಿ ನೋಡಿ ಒಂದು ಕ್ಷಣ ಅಬಕಾರಿ ಅಧಿಕಾರಿಗಳೇ ಘಾಬರಿಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಕಾಯ್ದೆ 1965ರ ಕಲಂ 11, 14, 15, 38(ಎ) ಹಾಗೂ 43(ಎ) ಅಡಿ ಕೇಸ್ ದಾಖಲಿಸಲಾಗಿದ್ದು, 144 ಬಾಟಲ್‍ಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.










