ಬೆಂಗಳೂರು: ಮಚ್ಚಿನಿಂದ ಪತ್ನಿಯ ಬರ್ಬರ ಹತ್ಯೆ, ಆರೋಪಿ ಪತಿ ಬಂಧನ.

47
Murderer back on the crime scene - Forensic science

ಬೆಂಗಳೂರು: ಪತಿಯಿಂದಲೇ ಪತ್ನಿಯು ಬರ್ಬರ ಹತ್ಯೆಗೀಡಾದ ಘಟನೆ ಶುಕ್ರವಾರ ತಡರಾತ್ರಿ ಬಾಗಲೂರು ಠಾಣೆ ವ್ಯಾಪ್ತಿಯ ಸಿಂಗೇನಹಳ್ಳಿಯಲ್ಲಿ ನಡೆದಿದೆ. ಮಚ್ಚಿನಿಂದ ಹೊಡೆದು ಸುಧಾ ಎಂಬಾಕೆಯನ್ನು ಕೊಲೆ ಮಾಡಲಾಗಿದೆ. ಆರೋಪಿ ಪತಿ ಶ್ರೀನಿವಾಸ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಕೋಳಿ ಅಂಗಡಿ ನಡೆಸುತ್ತಿದ್ದ ಶ್ರೀನಿವಾಸ್, ನಿತ್ಯ ಪಾನಮತ್ತನಾಗಿ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ. ಗಂಡನ ಕಾಟಕ್ಕೆ ಬೇಸತ್ತ ಸುಧಾ, ಹೊಸಕೋಟೆಯಲ್ಲಿರುವ ತನ್ನ ತವರುಮನೆ ಸೇರಿದ್ದಳು. ಕಳೆದ ಒಂದು ತಿಂಗಳ ಹಿಂದಷ್ಟೆ ಕುಟುಂಬಸ್ಥರು ರಾಜಿ ಸಂಧಾನ ಮಾಡಿದ ಬಳಿಕ ಗಂಡನ ಮನೆಗೆ ಮರಳಿದ್ದಳು. ಎರಡು ದಿನಗಳಿಂದ ಪುನಃ ಗಲಾಟೆ ಆರಂಭಿಸಿದ್ದ ಶ್ರೀನಿವಾಸ್, ತಡರಾತ್ರಿ ಕೋಳಿ ಕತ್ತರಿಸುವ ಮಚ್ಚಿನಿಂದ ಸುಧಾಳ ತಲೆ, ಕೈಗೆ ಹೊಡೆದು ಹತ್ಯೆಗೈದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.