ಬೇಲೂರು : ಡಿಕೆ ಶಿವಕುಮಾರ್ ಬೆನ್ನಿಗೆ ನಿಂತ ಮಾಜಿ ಸಚಿವ ಹೆಚ್.ಡಿ. ರೇವಣ್ಣ…

359

ಬೇಲೂರು : ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು, ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಮುಖಂಡ ಅಲ್ಲದೇ ನಮ್ಮ ಸಮಾಜದ ಮುಖಂಡ. ಅವರು ಎಲ್ಲಿ ಬೆಳೆದು ಬಿಡುತ್ತಾರೋ ಅನ್ನೋ ಒಂದೇ ಕಾರಣಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ. ಯಾರೆಲ್ಲಾ ಎಷ್ಟೆಷ್ಟು ಕೋಟಿ ಲೂಟಿ ಹೊಡೆದಿದ್ದಾರೆ. ಈ ಸಭೆಯ ಮೂಲಕ ನಾನು ಇದನ್ನು ಖಂಡಿಸುತ್ತೇನೆ. ಅವರೇನು ಕದ್ದು ಓಡಿ ಹೋಗಿದ್ದಾರಾ? ವಿಚಾರಣೆಗೆ ಕರೆದಾಗ ಹಾಜರಾಗಿದ್ದಾರೆ. ಇಡಿ ಅಧಿಕಾರಿಗಳ ಬಳಿ ತಂದೆಗೆ ಎಡೆ ಇಡಬೇಕು ಎಂದು ಮನವಿ ಮಾಡಿದ್ದರೂ ಅವರನ್ನು ಬಿಡಲಿಲ್ಲಾ. ತಂಂದೆಗೆ ಎಡೆ ಇಡುವುದಕ್ಕೂ ಬಿಡದೇ ಇರುವಷ್ಟು ಕರುಣೆ ಇಲ್ಲದ ಅಧಿಕಾರಿಗಳು. ಈ ದೇಶದಲ್ಲಿ ಏನು ನಡೆಯುತ್ತಿದೆ ಅನ್ನುವುದು ಜನರು ಅರ್ಥ ಮಾಡಿಕೊಳ್ಳಬೇಕು. ಇವತ್ತೇ ಎಲ್ಲಾ ರಾಜಕಾರಣ ಮುಗಿಯುವುದಿಲ್ಲ. ಎಲ್ಲವನ್ನೂ ಎದುರಿಸಿಯೇ ರಾಜಕೀಯದಲ್ಲಿದ್ದೇವೆ ಎಂದು ಹೇಳಿದ್ದಾರೆ.