ಮುಖದ ಮೇಲೆ ಮೊಬೈಲ್ ಲೈಟ್ ಬಿಟ್ಟಿದ್ದಕ್ಕೆ ವ್ಯಕ್ತಿಯ ಕೊಲೆ…

151
firstsuddi

ಮೈಸೂರು : ಮುಖದ ಮೇಲ್ ಮೊಬೈಲ್ ಟಾರ್ಚ್ ಹಾಕಿದ್ದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಿ.ಎಂ ಶ್ರೀನಗರದಲ್ಲಿ ನಡೆದಿದೆ. ಸೋಮಶೇಖರ್(36) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದ್ದು, ರೌಡಿ ಶೀಟರ್ ಸತ್ಯ ಎಂಬುವವರು ಸೋಮಶೇಖರ್ ನನ್ನು ಕೊಲೆ ಮಾಡಿದ್ದಾರೆ. ಆಗಸ್ಟ್ 24ರಂದು ನಡೆದ ಘಟನೆ ಇದಾಗಿದ್ದು, ಸೋಮಶೇಖರ್ ಸತ್ಯ ಎಂಬುವವರ ಮುಖಕ್ಕೆ ಮೊಬೈಲ್ ಬೆಳಕನ್ನು ಬಿಟ್ಟಿದ್ದರಿಂದ ಕೋಪಗೊಂಡ ಸತ್ಯ ಸೋಮಶೇಖರ್ ನನ್ನು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸೋಮಶೇಖರ್ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಘಟನೆ ಸಂಭವಿಸುತ್ತಿದ್ದಂತೆ ಆರೋಪಿ ರೌಡಿಶೀಟರ್ ಸತ್ಯ ಪರಾರಿಯಾಗಿದ್ದು, ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.