ಬೆಂಗಳೂರು : ಹಿಜಾಬ್ ,ಹಲಾಲ್ ಕಟ್, ಜಟ್ಕಾ ಕಟ್, ಆಜಾನ್, ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ, ಮಾವಿನ ಹಣ್ಣಿನ ಖರೀದಿ, ಟ್ಯಾಕ್ಸಿಯಲ್ಲಿ ಹಿಂದೂಗಳಿಗೆ ಆದ್ಯತೆ ಬಳಿಕ ಇದೀಗ ಮತ್ತೊಂದು ಅಭಿಯಾನ ಆರಂಭವಾಗಿದೆ.
ನಗರಕ್ಕೆ ಯಾವುದೇ ಕೊಡುಗೆ ನೀಡದ ವ್ಯಕ್ತಿಗಳ ಹೆಸರನ್ನೂ ಬದಲಾಯಿಸುವಂತೆ ಆಂದೋಲನ ನಡೆಸಲು ಬಿಜೆಪಿ ಮುಂದಾಗಿದೆ. ಬೆಂಗಳೂರಿನ ರಸ್ತೆಗಳು, ಏರಿಯಾ ಹೆಸರು ಬದಲಾಯಿಸುವಂತೆ ಬಿಜೆಪಿ ಮುಖಂಡರು ಅಭಿಯಾನ ಆರಂಭಿಸಿದ್ದು, ಹಿಂದುಯೇತರ ರಸ್ತೆಗಳು, ಏರಿಯಾಗಳ ಹೆಸರು ಬದಲಾಯಿಸುವಂತೆ ಬಿಬಿಎಂಪಿ ಅಯುಕ್ತರಿಗೆ ಪತ್ರ ಬರೆಯಲಾಗಿದೆ.
ನಗರದಲ್ಲಿರುವ ವಿಕ್ಟೋರಿಯ ರಸ್ತೆ, ಟಿಪ್ಪು ಸುಲ್ತಾನ್ ರಸ್ತೆ , ಟ್ಯಾನಿ ರಸ್ತೆ , ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ರಸ್ತೆಗಳು ಹಾಗೂ ಬಿಸ್ಮಿಲ್ ನಗರ, ಮೇಕ್ರಿ ಸರ್ಕಲ್ ನಲ್ಲಿರುವ ಇನಾಯತೂಲ್ಲಾ ಮೇಕ್ರಿ ರಸ್ತೆ, ಶಾಂತಿನಗರದ ಬಿಲಾಲ್ ರಸ್ತೆ, ಸುಲ್ತಾನ್ ಪಾಳ್ಯ, ಸೇರಿದಂತೆ ನೂರಾರು ಏರಿಯಾಗಳ ಹೆಸೆರು ಮರು ನಾಮಕಾರಣಕ್ಕೆ ಅಭಿಯಾನ ಆರಂಭವಾಗಿದೆ. ಈಗಾಗಲೇ ಬೆಂಗಳೂರಿನ ಟಿಪ್ಪು ಸುಲ್ತಾನ್ ರಸ್ತೆಯನ್ನೂ ಮರು ನಾಮಕಾರಣ ಮಾಡುವಂತೆ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ಎನ್. ಅರ್. ರಮೇಶ್ ಪಾಲಿಕೆ ಅಯುಕ್ತರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರಿಗೆ ಹೆಸರು ತಂದ ಗಣ್ಯ ವ್ಯಕ್ತಿಗಳ ಹೆಸರು ನಾಮಕರಣಕ್ಕೆ ಅಗ್ರಹಿಸಿದ್ದಾರೆ.










