ಮೂಡಿಗೆರೆ: ತಾಲ್ಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗಣ್ಣನಕೆರೆ ಗ್ರಾಮದ ಸಚಿನ್ ನಗರದಲ್ಲಿ ಇತ್ತೀಚಿಗೆ ನಿರ್ಮಾಣವಾದ ನೂತನ ಕಾಂಕ್ರೇಟ್ ರಸ್ತೆಗೆ ಪರಿಪೂರ್ಣ ಕಾಯಕಲ್ಪವಿಲ್ಲದೇ ರಸ್ತೆಯ ಎರಡೂ ಬದಿಗಳಲ್ಲಿ ಗುಂಡಿಗಳಿಗೆ ಮಣ್ಣನ್ನು ತುಂಬಿಸದೇ ಸುಮಾರು ಒಂದರಿಂದ ಎರಡು ಅಡಿಗಳಿಂತಲೂ ಜಾಸ್ತಿ ಇರುವ ಗುಂಡಿಗಳು ಇದ್ದು ಕಾಮಗಾರಿ ಮುಗಿದು ಸುಮಾರು ಎರಡು ತಿಂಗಳುಗಳೇ ಕಳೆದರು ರಸ್ತೆಯ ಎರಡೂ ಬದಿಗಳ ಗುಂಡಿಯನ್ನು ಮುಚ್ಚದೇ ಇರುವ ಕಾರಣ ಈ ರಸ್ತೆ ಇಲ್ಲಿನ ಜನರ ಪ್ರಾಣಕ್ಕೆ ಸಂಚಾಕಾರ ತರುವ ಉರುಳಾಗಿ ಮಾರ್ಪಟ್ಟಿದೆ.
ರಾಷ್ಟ್ರಿಯ ಹೆದ್ದಾರಿ 173 ರಿಂದ ಪ್ರಾರಂಭಗೊಂಡ ರಸ್ತೆಯೂ ಸುಮಾರು ಎರಡರಿಂದ ಮೂರು ಕಿ.ಮೀಟರ್ ಗಳಷ್ಟಿರುವ ಈ ಒಳ ರಸ್ತೆಯಲ್ಲಿ ಎಸ್.ಟಿ ಜನಾಂಗ ಸೇರಿದಂತೆ ಇನ್ನೂ ಹಲವರು ತಮ್ಮ ಕೃಷಿ ವಾಹಿವಾಟಿನೊಂದಿಗೆ ತಮ್ಮಲ್ಲಿರುವ ಅಲ್ಪ ಸ್ವಲ್ಪ ಜಮೀನು ಅಥವಾ ಮನೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು ಈ ರಸ್ತೆ ಹಲವು ವರುಷಗಳಿಂದ ದೊಡ್ಡ ದೊಡ್ಡ ಕಲ್ಲುಗಳು ಹಾಗೂ ಗುಂಡಿಯಿಂದ ಕೂಡಿದ ರಸ್ತೆಯಾಗಿದ್ದು ದ್ವಿಚಕ್ರ ಹಾಗೂ ಇನ್ನಿತರೇ ವಾಹನ ಸವಾರರಿಗೆ ನಿತ್ಯ ಕಿರಿ ಕಿರಿ ರಸ್ತೆಯಾಗಿದೆ.
ಯಾವುದಾದರೊಂದು ಅವದಿಯಲ್ಲಿ ಜನಪ್ರತಿನಿಧಿಗಳು ಇಲ್ಲಿಗೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ,ಅಥವಾ ಯಾವುದಾದರೊಂದು ಅನುಧಾನದಲ್ಲಿ ರಸ್ತೆಗೆ ಸ್ವಲ್ಪ ಮಟ್ಟಿಗಾದರೂ ಮದ್ಯೆ ಮದ್ಯೆ ಅಲ್ಲಲ್ಲಿ ಮೀಟರಿನ ಲೆಕ್ಕದಲ್ಲಿ ಅಲ್ಪ ಸ್ವಲ್ಪ ಕಾಂಕ್ರೇಟಿನ ಭಾಗ್ಯ ದೊರಕಿಸಿದ್ದರೂ ಅದರಲ್ಲಿ 2018-19 ಸಾಲಿಗೆ ಮುಂದುವರಿದ ಭಾಗದಂತೆ ಸ್ವಲ್ಪ ದೂರ ಕಾಂಕ್ರೇಟ್ ರಸ್ತೆ ನಿರ್ಮಾಣ ಮಾಡಿದ್ದಾರೆ. ಆದರೆ ಈ ಹೊಸದಾಗಿ ನಿರ್ಮಾಣವಾದ ರಸ್ತೆಯೂ ಇಲ್ಲಿನ ಗ್ರಾಮಸ್ಥರ ಅನುಕೂಲಕ್ಕಿಂತ ತಮ್ಮ ತಮ್ಮ ಜೀವಕ್ಕೆ ಅಪಾಯದ ಅಡಿಪಾಯ ಹಾಕಿದಂತಿದೆ.
ರಸ್ತೆಗೆ ಸಂಬಂಧಿಸಿದಂತೆ ಗುತ್ತಿಗೆ ಪಡೆಯುವ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ಕೆಲವು ಮಾನದಂಡಗಳಿದ್ದು ಅದರಲ್ಲಿ ಇಂತಹ ರಸ್ಥೆ ನಿರ್ಮಾಣವಾಗುವಾಗು ಸರ್ಕಾರಿ ಅಭಿಯಂತರರು ಇದರ ಮೇಲುಸ್ಥುವಾರಿಯನ್ನು ನೋಡಿಕೊಳ್ಳಬೇಕು ಮತ್ತು ಇದರ ಗುಣಮಟ್ಟದ ಪರಿಶೀಲನೆ ನಿರ್ವಹಣೆಯೂ ಸಹ ಇವರದೇ ಪಾತ್ರವಾಗಿದೆ. ಇದ್ಯಾವುದು ಇವರಿಗೆ ಲೆಕ್ಕವಿಲ್ಲದಂತೆ ಇಂತಹ ವಿಚಾರದಲ್ಲಿ ಕೇವಲ ಕಮಿಷನ್ ವ್ಯವಹಾರದಲ್ಲೇ ಕೆಲಸಗಳು ಮುಗಿಸುವ ಲಕ್ಷಣಗಳು ಹೆಚ್ಚು ಎಂಬಂತೆ ತೋಚುತ್ತದೆ ಅದಕ್ಕೆ ಉದಾಹರಣೆ ಯೆಂಬಂತೆ ಇಲ್ಲಿ ನಿರ್ಮಾಣವಾಗಿರುವ ಕಾಂಕ್ರೇಟ್ ರಸ್ತೆಗೆ ಎರಡೂ ಬದಿಯ ಚರಂಡಿಗಳನ್ನು ಮುಚ್ಚದೇ ಇಲ್ಲಿನ ಗ್ರಾಮಸ್ಥರ ಸಾವುನೋವಿಗೆ ಕಾದಂತಿದೆ ಇಲ್ಲಿನ ರಸ್ತೆಯ ಪರಸ್ಥಿತಿ.
ಇಂತಹ ಪರಿಸ್ಥಿತಿಯನ್ನು ಮನಗಂಡ ಇಲ್ಲಿನ ಗ್ರಾಮಸ್ಥರು ಖುದ್ದು ಲೋಕೂಪಯೋಗಿ ಇಲಾಖೆಯ ಅಭಿಯಂತರರಿಗೆ ವಿಷಯದ ಕುರಿತು ಪ್ರಸ್ಥಾಪಮಾಡಿದರೂ ಇದುವರೆಗೇ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇಂತಹ ಸೂಕ್ಷ್ಮ ವಿಚಾರದಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೇ ಇದರಿಂದ ಏನಾದರು ಸಾವು ನೋವು ಸಂಭವಿಸಿದಲ್ಲಿ ಇದಕ್ಕೆ ಗುತ್ತಿಗೆದಾರರೂ ಹಾಗೂ ಇದಕ್ಕೆ ಸಂಬಂಧಿಸಿದ ಅಭಿಯಂತರರೇ ನೇರ ಕಾರಣ ಎಂದು ಇಲ್ಲಿನ ಗ್ರಾಮಸ್ಥರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಮಾಹಿತಿಯನ್ನು ನೀಡಿದರು.










