ಮೇ 25ರಿಂದ ಒಂದು ತಿಂಗಳು ಕಾಮಗಾರಿ ಸ್ಥಗಿತಗೊಳಿಸಲು ಗುತ್ತಿಗೆದಾರರ ತೀರ್ಮಾನ…

72
firstsuddi

ಬೆಂಗಳೂರು : ಮೇ 25 ರಿಂದ ಒಂದು ತಿಂಗಳುಗಳ ಕಾಲ ರಾಜ್ಯಾದ್ಯಂತ ಗುತ್ತಿಗೆ ಕೆಲಸಗಳನ್ನು ಸ್ಥಗಿತಗೊಳಿಸೋದಾಗಿ ಗುತ್ತಿಗೆದಾರರ ಸಂಘದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರಾಜ್ಯ ಗುತ್ತಿಗೆದಾರರ ಸಂಘದ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಒಂದು ತಿಂಗಳು ಕೆಲಸ ಸ್ಥಗಿತಗೊಳಿಸುವಂತೆ ತೀರ್ಮಾನ ಮಾಡಲಾಗಿದೆ. ಮೇ 25ರಿಂದ ಒಂದು ತಿಂಗಳು ರಾಜ್ಯಾದ್ಯಂತ ಕೆಲಸ ಸ್ಥಗಿತಗೊಳಿಸುತ್ತೇವೆ. ಭ್ರಷ್ಟಾಚಾರ ಹೆಚ್ಚಿದ್ದರೂ ಸಿಎಂ ಮೌನವಾಗಿರೋದು ಸರಿಯಲ್ಲ. ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಚಾರ ನಡೀತಾ ಇದೆ. ರೌಡಿಗಳ ಮೂಲಕ ಸಂತೋಷ್ ಗೆ ಬೆದರಿಕೆ ಹಾಕಿಸೋ ಕೆಲ್ಸ ಸರ್ಕಾರ ಮಾಡಿದೆ. ನಮ್ಮ ಹತ್ರನೂ ಭ್ರಷ್ಟಾಚಾರದ ದಾಖಲೆಗಳಿವೆ. ದಾಖಲೆ ಬಿಡುಗಡೆಗೆ ನಾವು ಹೆದರುತ್ತಿದ್ದೇವೆ. ನಮಗೆ ಕೊಲೆ ಬೆದರಿಕೆ ಬರುತ್ತಿವೆ. ಬೆದರಿಕೆ ಬರ್ತಿರೋದ್ರಿಂದ ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ. ನೀರಾವರಿ ಇಲಾಖೆಯಲ್ಲಿ ಟೆಂಡರ್ ಅನ್ನ ಹೈಕ್ ಮಾಡುವ ಕೆಲ್ಸ ಆಗ್ತಿದೆ. ಸಿಎಂ ಬೊಮ್ಮಾಯಿಗೆ 4 ಬಾರಿ ದೂರು ಕೊಟ್ವಿದ್ರೂ ಪ್ರಯೋಜನವಾಗಿಲ್ಲ. ಇದು ರೌಡಿಗಳ ಸರ್ಕಾರ ಎಂದು ನೇರ ಆರೋಪ ಮಾಡಿದ್ದಾರೆ.

ಆರೋಗ್ಯ, ನೀರಾವರಿ, ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಟಾಪ್ ಭ್ರಷ್ಟಾಚಾರ ಹೊಂದಿರುವ ಇಲಾಖೆಗಳಾಗಿವೆ. ನೀರಾವರಿ ಇಲಾಖೆಯಲ್ಲಿ ಏಜೆಂಟ್ ನ ನೇಮಕ ಮಾಡಿದ್ದಾರೆ. ಅವ್ರ ಮೂಲಕ ಕಮೀಷನ್ ಪಡೆಯುತ್ತಾರೆ. ಬಿಬಿಎಂಪಿಯಲ್ಲಿ ಶೇ.15ರಷ್ಟು ಕಮೀಷನ್ ದಂದೆ ನಡೀತಿದೆ. ಲಂಚ ಕೊಟ್ಟಿರೋ ದಿನಾಂಕ ಎಲ್ಲವೂ ನಮ್ಮ ಬಳಿ ದಾಖಲೆ ಇವೆ. ಶಾಸಕರ ಮಕ್ಕಳೇ ಗುತ್ತಿಗೆದಾರರಾಗಿ ಕೆಲ್ಸ ಮಾಡ್ತಿದ್ದಾರೆ. ಇವತ್ತಿನಿಂದ 15 ದಿನ ಕಾಲಾವಕಾಶ ಕೊಡ್ತೀವಿ. ಭ್ರಷ್ಟಚಾರದ ದಾಖಲೆಗಳನ್ನ ಬಳಿಕ ಬಿಡುಗಡೆ ಮಾಡ್ತೀವಿ.

ಸಂತೋಷ್ ಆತ್ಮಹತ್ಯೆ ಪ್ರಕರಣವನ್ನ ಸಿಬಿಐ ಅಥವಾ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರರ ಕುಟುಂಬಕ್ಕೆ 2 ಕೋಟಿ ಪರಿಹಾರ ನೀಡಬೇಕು. ಕೂಡಲೇ ಗುತ್ತಿಗೆ ಹಣ ಬಿಡುಗಡೆ ಮಾಡಬೇಕು. ಗುತ್ತಿಗೆದಾರನ ಸಾವಿಗೆ ಸರ್ಕಾರವೇ ನೇರ ಹೊಣೆ ಹೊರಬೇಕು. ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಪರಿಹಾರ ನೀಡುವಂತೆ ಕೆಂಪಣ್ಣ ಆಗ್ರಹಿಸಿದರು.