ಮೈಸೂರು : ಎಪಿಎಂಸಿ ಏಜೆಂಟ್‍ನ ಬರ್ಬರ ಹತ್ಯೆ!

83
firstsuddi

ಮೈಸೂರು : ಎಪಿಎಂಸಿ ಮಾರುಕಟ್ಟೆಯ ಏಜೆಂಟ್ ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬಂಡೀಪಾಳ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರದ ನಿವಾಸಿ ರವಿ ಅಲಿಯಾಸ್ ಕ್ಯಾಪ್ಸಿಕಂ ರವಿ ಕೊಲೆಯಾದವರು. ಎಪಿಎಂಸಿ ಮಳಿಗೆಯಲ್ಲಿ ಕರ್ತವ್ಯ ನಿರತರಾಗಿದ್ದಾಗಲೇ ಈ ದುಷ್ಕೃತ್ಯ ನಡೆದಿದೆ.

ಗೌತಮ್ ಎಂಬ ವ್ಯಕ್ತಿ ಸೇರಿದಂತೆ ನಾಲ್ವರು ದುಷ್ಕರ್ಮಿಗಳ ತಂಡ ರವಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕಮಿಷನ್ ವಿಚಾರವಾಗಿ ರವಿ ಹಾಗೂ ಆರೋಪಿ ಗೌತಮ್ ನಡುವೆ ಗಲಾಟೆ ನಡೆದಿತ್ತು. ಇದೇ ದ್ವೇಷದಿಂದ ಕೃತ್ಯ ಎಸಗಲಾಗಿದೆ ಎಂದು ಶಂಕಿಸಲಾಗಿದೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.