ಯುವ ಇಂಜಿನಿಯರ್ ಗಳು ವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು : ಸಿ.ಪಿ.ಸುರೇಶ್.

72
firstsuddi

ಚಿಕ್ಕಮಗಳೂರು : ಯುವ ಇಂಜಿನಿಯರ್ ಗಳು ವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನಿನ ಅಧ್ಯಕ್ಷ ಸಿ.ಪಿ.ಸುರೇಶ್ ಸಲಹೆ ನೀಡಿದರು.

ನಗರದ ಲಯನ್ಸ್ ಭವನದಲ್ಲಿ ನಿನ್ನೆ ನಡೆದ ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನ ದಿನೇದಿನೇ ಬೆಳೆಯುತ್ತಿವೆ, ಎಲ್ಲಾ ಕ್ಷೇತ್ರಗಳಲ್ಲೂ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ ಅವುಗಳನ್ನು ನಮ್ಮ ವೃತ್ತಿಯಲ್ಲಿ ಬಳಸಿಕೊಂಡರೆ ನಾವು ಬೆಳೆಯುವದರ ಜೊತೆಗೆ ಸಮಾಜಕ್ಕೆ ಅತ್ಯುತ್ತಮವಾದ ಕಟ್ಟಡಗಳನ್ನೂ ನೀಡಬಹುದು ಎಂದು ಕಿವಿಮಾತು ಹೇಳಿದರು.

ತಮ್ಮ ಅವಧಿಯಲ್ಲಿ ಹಲವು ಸಾಮಾಜಿಕ ಸೇವಾ ಕಾರ್ಯವನ್ನು ಮಾಡುವ ಗುರಿ ಹೊಂದಿದ್ದು ಅವುಗಳ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಎಂ.ಎ.ನಾಗೇಂದ್ರ ತಮ್ಮ ಅವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಸಿ.ಪಿ.ಸುರೇಶ್ ನೇತೃತ್ವದ ನೂತನ ಪದಾಧಿಕಾರಿಗಳ ತಂಡಕ್ಕೆ ನಿಕಟ ಪೂರ್ವ ಅಧ್ಯಕ್ಷ ಎಂ.ಎ.ನಾಗೇಂದ್ರ ಸಮಾರಂಭದಲ್ಲಿ ಅಧಿಕಾರವನ್ನು ಹಸ್ತಾಂತರಿಸಿದರು, ನೂತನ ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಹಿರಿಯ ಇಂಜಿನಿಯರ್ ಗಳಾದ ವೆಸ್ಲಿ ಪಿಂಟೋ, ದೊಡ್ಡೇಗೌಡ, ಎನ್.ಎಸ್.ನಾಗೇಂದ್ರ ಮತ್ತು ಎಂ.ಎ.ನಾಗೇಂದ್ರ ದಂಪತಿಯನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಶಶಿಧರ್, ಸಹಸಂಯೋಜಕರಾದ ಎಂ.ಜಿ.ಕಿರಣ್, ಕೆ.ಎಸ್.ಸತೀಶ್, ಕಾರ್ಯದರ್ಶಿಗಳಾದ ಹೆಚ್.ಟಿ.ವಿಶ್ವನಾಥ್, ವಿ.ಟಿ.ನಿಂಗರಾಜು, ಖಜಾಂಚಿಗಳಾದ ಸಿ.ಕೆ.ವಿನೋದ್, ನಾಗೇಂದ್ರ ಪ್ರಸಾದ್, ಸಾಂಸ್ಕೃತಿಕ ಕಾರ್ಯದರ್ಶಿ ಮೋನಿಷಾ, ಸಂಘಟನಾ ಕಾರ್ಯದರ್ಶಿ ಭವಾನಿ ಶಂಕರ್, ಅಂಜನ್ ಶೆಟ್ಟಿ, ಶ್ರೀರಾಮ ರಾವ್ ಉಪಸ್ಥಿತರಿದ್ದರು.