ಕೊರೊನಾ ಯಾವಾಗ ಕೊನೆಯಾಗುತ್ತೆ? : ಕೋಡಿಮಠದ ಶ್ರೀಗಳು ನುಡಿದ್ರು ಭವಿಷ್ಯ!

56
firstsuddi

ಬಳ್ಳಾರಿ : ಇನ್ನು ಒಂದೂವರೆ ವರ್ಷದಲ್ಲಿ ಈ ಮಾರಿ ಹೋಗುತ್ತೆ. ಆದರೆ, ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗುತ್ತೆ. ಈಗಿನಿಂದಲೇ ಎಚ್ಚರ ವಹಿಸಬೇಕು ಎಂದು ಕೊರೊನಾ ಕುರಿತು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ರಾಜಕೀಯದ ಬಗ್ಗೆ ಭವಿಷ್ಯ ನುಡಿದ ಶ್ರೀಗಳು, ರಾಜಕೀಯ ಅಸ್ಥಿರತೆ ಕಾಡುತ್ತೆ ಅಂತಾ ಮೊದಲೇ ಹೇಳಿದ್ದೆ. ಗುಂಪುಗಳಾಗ್ತವೆ ಅಂದಿದ್ದೆ. ಅದನ್ನು ಈಗ ಕಂಡುಕೊಂಡಿದ್ದೀರ. ದೇಶದಲ್ಲಿ ಅವಘಢ ಆಗುತ್ತೆ ಎಂದಿದ್ದೆ. ಅದು ಈಗ ಆರಂಭವಾಗಿದೆ. ಪೈಗಂಬರರನ್ನು ಅವಹೇಳನ ಮಾಡಿದ್ದಾರೆ. ಜಗತ್ತಿನಾದ್ಯಂತ ಸಮಸ್ಯೆ ಶುರುವಾಗಿದೆ. ಮುಂದೆ ಇದರಿಂದ ದೊಡ್ಡ ಅಪಾಯವೂ ಇದೆ. ಮತೀಯ ಗಲಭೆ ಆಗುತ್ತೆ ಅಂತಾ ಹೇಳಿದ್ದೆ. ಸಾವು, ನೋವು ಆಗುತ್ತೆ ಅಂದಿದ್ದೆ. ಅದು ಆಗ್ತಿದೆ ಎಂದರು.

ಮಳೆ ಬಗ್ಗೆಯೂ ಭವಿಷ್ಯ ನುಡಿದಿರುವ ಶ್ರೀಗಳು, ಈ ಹಿಂದೆ ಕೆಂಡಾಮಂಡಲ ಆಗುತ್ತೆ ಎಂದಿದ್ದೆ. ಮಲೆನಾಡು ಬಯಲಾಗುತ್ತೆ, ಬಯಲು ಮಲೆನಾಡಾಗುತ್ತೆ ಎಂದಿದ್ದೆ. ಈಗ ಎಲ್ಲ ಕಡೆ ನೀರು ಕೆಂಡಾಮಂಡಲ ಆಗ್ತಾ ಇದೆ. ಈ ಬಾರಿ ದೊಡ್ಡ ನಗರಗಳಿಗೆ ತೊಂದರೆ ಹೆಚ್ಚಾಗಲಿದೆ ಎಂದಿದ್ದಾರೆ.