ರಾಜ್ಯದಲ್ಲಿ ಮಳೆ, ಶೀತಗಾಳಿ – ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ…

49
firstsuddi

ಬೆಂಗಳೂರು : ಮಾಂಡೋಸ್ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಪ್ರಮಾಣದಲ್ಲಿ ಮಳೆ, ಶೀತ ಗಾಳಿ ಮತ್ತು ಅತಿ ಕಡಿಮೆ ತಾಪಮಾನವು ವರದಿಯಾಗಿದೆ. ಇದರಿಂದ ಎದುರಾಗುವ ಆರೋಗ್ಯ ಸಮಸ್ಯೆಯಿಂದ ದೂರ ಇರಲು ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

ಮುಂಬರುವ ಚಳಗಾಲದ ದಿನಗಳಲ್ಲಿ ಸಾರ್ವಜನಿಕರು, ಮಕ್ಕಳು ( ನವಜಾತ ಶಿಶುಗಳು ಸೇರಿದಂತೆ), ಗರ್ಭಿಣಿಯರು, ವೃದ್ಧರು, ವಿಶೇಷವಾಗಿ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಕೆಳಗಿನ ಸಲಹೆಗಳನ್ನು ಪಾಲಿಸಬೇಕು.

ಮಾಡಬೇಕಾದ್ದು:
• ಯಾವಾಗಲೂ ಬೆಚ್ಚಗಿನ ನೀರು ಕುಡಿಯುವುದು
• ಸುಲಭವಾಗಿ ಜೀರ್ಣವಾಗುವ ಹಾಗೂ ಆಗತಾನೆ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದು
• ಯಾವಾಗಲೂ ಸ್ವೆಟರ್, ಸಾಕ್ಸ್ ಹಾಗೂ ಕೈಗವಸುಗಳನ್ನು ಧರಿಸುವುದು ಹಾಗೂ ಮನೆಯ ಒಳಗಿರುವಾಗಲೂ ಬೆಚ್ಚಗಿರುವುದು ಉತ್ತಮ
• ಸ್ನಾನಕ್ಕೆ ಬಿಸಿ ನೀರು / ಬೆಚ್ಚಗಿನ ನೀರನ್ನು ಉಪಯೋಗಿಸುವುದು
• ಅನಗತ್ಯವಾಗಿ ಹೊರ ಸಂಚಾರವನ್ನು ತಪ್ಪಿಸಿ
• ಕಿವಿಗಳನ್ನು ಹತ್ತಿಯಿಂದ ಮುಚ್ಚಿಕೊಳ್ಳಿ ಅಥವಾ ಸ್ಕಾರ್ಫ್ ಕಟ್ಟಕೊಳ್ಳಿ ಹಾಗೂ ಹೋಗಲೇಬೇಕಾದಲ್ಲಿ ಮಾಸ್ಕ್ ಧರಿಸಬೇಕು.
• ನೆಗಡಿ, ಕೆಮ್ಮು ಹಾಗೂ ಜ್ವರದ ಲಕ್ಷಣಗಳರುವರಿಂದ ದೂರವಿರಬೇಕು
• ಮೊಣಕೈ ಒಳಗೆ ಸೀನುವುದು, ಕೆಮ್ಮುವುದು, ಅಥವಾ ಸೀನುವಾಗ, ಕೆಮ್ಮುವಾಗ ಟಿಶ್ಯೂ ಅಥವಾ ಕರವಸ್ತ್ರವನ್ನು ಬಳಸಬೇಕು
• ಕೈಗಳನ್ನು ಆಗಾಗ್ಗೆ ನೀರು ಹಾಗೂ ಸೋಪಿನಿಂದ ತೊಳೆಯಬೇಕು
• ಜ್ವರ ಲಕ್ಷಣಗಳು ಅಥವಾ ಇತರೆ ಯಾವುದಾದರೂ ಖಾಯಿಲೆಯ ಲಕ್ಷಣಗಳಿದ್ದಲ್ಲಿ ತಕ್ಷಣವೇ ವೈದ್ಯರ ಸಲಹೆಯನ್ನು ಪಡೆಯುವುದು.

ಮಾಡಬಾರದ್ದು:
• ಸ್ವಯಂವೈದ್ಯ ಪದ್ಧತಿಗಳನ್ನು ಅನುಸರಿಸಬಾರದು.
• ತಣ್ಣಗಿನ ಪಾನೀಯಗಳು , ಐಸ್ ಕ್ರೀಂಗಳನ್ನು ಸೇವಿಸಬಾರದು.
• ರೆಫ್ರಿಜರೇಟರ್ ನ ಅಥವಾ ತಣ್ಣಗಿನ ನೀರನ್ನು ಕುಡಿಯಬಾರದು.
• ಮಳೆಯಲ್ಲಿ ನೆನೆಯುವುದನ್ನು ಹಾಗೂ ತಣ್ಣನೆಯ ಶೀತ ಗಾಳಿಗೆ ಮೈ ಒಡ್ಡುವುದನ್ನು ತಪ್ಪಿಸಬೇಕು.
• ಹೊರಾಂಗಣ ಪ್ರವಾಸಗಳನ್ನು ಆದಷ್ಟು ನಿರ್ಬಂಧಿಸಿ ( ವಿಶೇಷವಾಗಿ ಗಿರಿಧಾಮಗಳಿಗೆ ವಾರಾಂತ್ಯದ ಪ್ರವಾಸ ಹೋಗುವುದು ಇತ್ಯಾದಿ).
• ಮಸಾಲಾಯುಕ್ತ ಪದಾರ್ಥಗಳು / ಜಂಕ್ ಫುಡ್ ಗಳನ್ನು ಸೇವಿಸಬಾರದು.