ಲವ್ ಸೆಕ್ಸ್ ದೋಖಾ: ಮದ್ವೆಯಾಗುವುದಾಗಿ ನಂಬಿಸಿ ವಂಚಿಸಿದ ಯುವಕ…

50
firstsuddi

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಟೆಕ್ಕಿ ಯುವತಿಗೆ ಯುವಕ ವಂಚನೆ ಮಾಡಿರುವಂತಹ ಘಟನೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆ ಮೂಲಕ ನಗರದಲ್ಲೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಬೆಳಕಿಗೆ ಬಂದಿದೆ.

ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾದ್ದ 27 ವರ್ಷದ ಯುವತಿಗೆ ಆದಿತ್ಯ ಸಿಂಗ್ ಎಂಬಾತ ವಂಚಿಸಿದ್ದಾನೆ. ಜಿಮ್​ನಲ್ಲಿ ಯುವತಿಗೆ ಆದಿತ್ಯ ಸಿಂಗ್ ಪರಿಚಯ ಆಗಿದ್ದ. ಬಳಿಕ ಲಿವಿಂಗ್ ರಿಲೇಷನ್​ಶಿಪ್​​ನಲ್ಲಿದ್ದರು.

ಮದುವೆ ಆಗುವಂತೆ ಯುವತಿ ಕೇಳಿದ್ದಕ್ಕೆ ಆದಿತ್ಯ ಸಿಂಗ್ ನಿರಾಕರಿಸಿದ್ದು, ಯುವತಿ ಮೇಲೆ ಹಲ್ಲೆ, ಚಾಕುವಿನಿಂದ ಇರಿದು ಗೋಡೆಗೆ ತಲೆ ಚಚ್ಚಿದ ಆರೋಪ ಮಾಡಲಾಗಿದೆ.

ಸದ್ಯ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.