ವರುಣನ ಆರ್ಭಟಕ್ಕೆ ಮನೆ ಗೋಡೆ ಕುಸಿತ – ಪಕ್ಕದ ಮನೆಯ ನಾಲ್ವರ ರಕ್ಷಣೆ…

62
firstsuddi

ಹುಬ್ಬಳ್ಳಿ : ನಗರದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ನಗರದ ಗಣೇಶಪೇಟೆಯ ಬಿಂದರಗಿ ಓಣಿಯಲ್ಲಿ ಮನೆಯೊಂದರ ಗೋಡೆ ಕುಸಿದ ಪರಿಣಾಮ ಮನೆಯೊಳಗೆ ಸಿಲುಕಿದ್ದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ.

ಗೋಡೆ ಕುಸಿಯುತ್ತಿರುವುದನ್ನು ಕಂಡ ಮನೆ ಮಾಲೀಕ ಬಸವಂತ ಶಿಂಧೆ, ಅವರ ಪತ್ನಿ ಹಾಗೂ ತಮ್ಮ ಮೂವರು ಮಕ್ಕಳು ಓಡಿ ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಪಕ್ಕದ ಮನೆಯ ಮೇಲೆ ಈ ಮಣ್ಣಿನ ಗೋಡೆ ಬಿದ್ದಿದ್ದರಿಂದಾಗಿ ಅವರ ಮನೆಯಲ್ಲಿ ನಾಲ್ಕು ಜನ ಸಿಲುಕಿದ್ದರು. ಸರಿಯಾದ ಸಮಯಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಒಂದೇ ಕುಟುಂಬದ ಆರಿಫ್ ಖಾನ್, ಶೈನಾಜ್ ಬಾನು, ಸಾಧಿಕ್ ಹಾಗೂ ನಾಜಿಯಾ ಎಂಬುವರನ್ನು ರಕ್ಷಣೆ ಮಾಡಿದ್ದಾರೆ.