ಹಾಸನ : ಇಡೀ ದೇಶವೇ ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಮುಂದಾಗಿದ್ದರೆ, ಹಾಸನದ ಅರಸೀಕೆರೆ ನಗರ ಸಭೆಯ ಸಿಬ್ಬಂಧಿಗಳು ಕಚೇರಿಯಲ್ಲಿ ಟಿಕ್ಟಾಕ್ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಗರಸಭೆಯ ಕೆಲವು ಸಿಬ್ಬಂಧಿಗಳು ಸರ್ಕಾರಿ ಕಚೇರಿಯೊಳಗೆ ಟಿಕ್ಟಾಕ್ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ಕಂಡ ಸಾರ್ವಜನಿಕರೊಬ್ಬರು ಕೊರೊನಾ ವಿರುದ್ಧ ಹೋರಾಡುವ ಕರ್ತವ್ಯವನ್ನು ಬಿಟ್ಟು ನಿಮಗೆ ಟಿಕ್ಟಾಕ್ ವೀಡಿಯೋ ಮಾಡಲು ಅನುಮತಿ ನೀಡಿದವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಅಸಮಾಧಾನ ಹೊರಹಾಕಿರುವ ಅರಸೀಕರೆ ಶಾಸಕ ಶಿವಲಿಂಗೇಗೌಡ ಅವರು ಟಿಕ್ಟಾಕ್ ವೀಡಿಯೋ ಮಾಡಿರುವ ಸಿಬ್ಬಂಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.










