ಹೊನ್ನಾಳಿ ಹುಲಿ ನಾನು ಯಾವುದಕ್ಕೂ ಜಗ್ಗಲ್ಲ : ಎಂ.ಪಿ ರೇಣುಕಾಚಾರ್ಯ.

542
firstsuddi

ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು, ಸಚಿವ ಸ್ಥಾನಕ್ಕಾಗಿ ನಾನು ಭಿಕ್ಷೆ ಬೇಡುವುದಿಲ್ಲ. ಹೊನ್ನಾಳಿ ಹುಲಿ ನಾನು ಯಾವುದಕ್ಕೂ ಜಗ್ಗಲ್ಲ. ನನಗೆ ಸದ್ಯ ಮಂತ್ರಿ ಸ್ಥಾನದ ಅಗತ್ಯವಿಲ್ಲ. ಮಂತ್ರಿ ಸ್ಥಾನ ಬೇಕೆಂದರೆ ನಾನು ಯಡಿಯೂರಪ್ಪ ಅವರ ಬಳಿ ಪಟ್ಟು ಹಿಡಿದು ಕುಳಿತುಕೊಳ್ಳುತ್ತೇನೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ನಾನು ದ್ರೋಹ ಮಾಡುವುದಿಲ್ಲ. ಸೋತವರೆಲ್ಲರೂ ಯಡಿಯೂರಪ್ಪ ಅವರು ಸಂಕಷ್ಟದಲ್ಲಿದ್ದಾಗ ಸಾಥ್ ನೀಡಲಿಲ್ಲ. ಈಗ ಸಚಿವರಾದ ಬಳಿಕ ನಮಗೆ ನೀತಿ ಪಾಠ ಮಾಡುತ್ತಿದ್ದಾರೆ. ಅವರ ಬಳಿ ನೀತಿ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ನನಗಿಲ್ಲ ಎಂದು ಹೇಳಿದರು.