ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾಡೋಜ ಗೊರುಚ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ: ಡಾ.ಬಸವರಾಜ ನೆಲ್ಲಿಸರ.

13

ಚಿಕ್ಕಮಗಳೂರು: ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ನಾಡಿನ ಹಿರಿಯ ಸಾಹಿತಿ. ನಾಡೋಜ. ಗೊರುಚ ಅವರು ಸಾಹಿತ್ಯ ಕ್ಷೇತ್ರಕ್ಕೆ ಅತ್ಯಮೂಲ್ಯ ಮತ್ತು ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಸಾಹಿತಿ ಡಾ.ಬಸವರಾಜ ನೆಲ್ಲಿಸರ ಹೇಳಿದರು. ಅಜ್ಜಂಪುರ ತಾಲೂಕಿನ ಚಿಕ್ಕಾನವಂಗಲ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ ಭಾನುವಾರ ಆಯೋಜಿಸಿದ್ದ ಹಿರಿಯ ಸಾಹಿತಿ ಡಾ.ಗೊರುಚ ಅವರ ಬದುಕು ಬರಹ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಗೊರುಚ ಅವರನ್ನು ಆಯ್ಕೆ ಮಾಡಿರುವುದು ಸ್ತುತ್ಯಾರ್ಹ ಮತ್ತು ಜಿಲ್ಲೆಗೆ ಹೆಮ್ಮೆಯ ಸಂತಸದ ಸಂಗತಿ ಎಂದ ಅವರು ಗೊರುಚ ಅವರು ಜಾನಪದ ಮತ್ತು ಶರಣ ಸಾಹಿತ್ಯ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿ ಅದನ್ನು ಶ್ರೀಮಂತ ಗೊಳಿಸಿದ್ದಾರೆ ಎಂದರು. ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗೊರುಚ ಅವರು ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಾರೆ. ಒಂದೊಂದು ರೂಪಾಯಿ ದೇಣಿಗೆ ಸಂಗ್ರಹಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತನ್ನು ಆರ್ಥಿಕವಾಗಿ ಬೆಳೆಸಿದ್ದಾರೆ. ಪ್ರಶಸ್ತಿ ರೂಪದಲ್ಲಿ ತಮಗೆ ಬಂದ 25 ಲಕ್ಷ ರೂ ಹಣವನ್ನು ಜಾನಪದ ಕಲಾವಿದರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರಕ್ಕೆ ನೀಡಿದ್ದಾರೆ. ನಾಡಿನಾದ್ಯಂತ ಸಾವಿರಾರು ಜಾನಪದ ಕಲಾವಿದರನ್ನು. ಸಾಹಿತಿಗಳನ್ನು ಬೆಳೆಸಿದ್ದಾರೆ ಎಂದು ತಿಳಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ ನಮ್ಮ ಜಿಲ್ಲೆಯ ಹೆಮ್ಮೆಯ ಸಾಹಿತಿ ಗೊರುಚ ಅವರು ಹೊನ್ನ ಬಿತ್ತೇವು ಹೊಲಕೆಲ್ಲ ಎಂಬಂತ ನೂರಾರು ಜಾನಪದ ಕೃತಿಗಳನ್ನು ಬರೆದಿದ್ದಾರೆ. ಸಾಕ್ಷಿ ಕಲ್ಲು. ಬೆಳ್ಳಕ್ಕಿ ಹಿಂಡು ಬೆದರಾವು. ಅಯ್ಯನಕೆರೆ ಮುಂತಾದ ಜಾನಪದ ನಾಟಕಗಳನ್ನು ಬರೆದಿದ್ದಾರೆ ಎಂದು ಹೇಳಿದರು. ಗೊರುಚ ಅವರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಪಟ್ಟ ದೊರೆತಿರುವುದು ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಸ್ವಾಮೀಜಿ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಾಲೂಕು ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಚಿಕ್ಕಾನವಂಗಲದ ಶಂಕರಪ್ಪ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವೀರಗಾಸೆ ಕಲಾವಿದ ಡಾ. ಮಾಳೇನಹಳ್ಳಿ ಬಸಪ್ಪ. ಕಸಾಪ ತಾಲೂಕು ಅಧ್ಯಕ್ಷ ಚಂದ್ರಪ್ಪ. ಮರುಳ ಸಿದ್ದಪ್ಪ. ಗೊಂಡೆದಹಳ್ಳಿ ತಿಪ್ಪೇಶ್. ಶಿವಕುಮಾರ್. ಕೆ.ಸಿ. ಶಿವಮೂರ್ತಿ.ಆರ್. ನಾಗೇಶ್. ಓಂಕಾರಯ್ಯ. ಸಿ. ಎಮ್.ಪರಮೇಶ್ವರಪ್ಪ. ಗಂಗಾಧರಪ್ಪ. ನಾರಾಯಣಪುರ ರಾಜಣ್ಣ ದೇವರಾಜ್ ಸೋಮಣ್ಣ. ಬಸಮ್ಮ. ಗಾಯತ್ರಮ್ಮ ಉಪಸ್ಥಿತರಿದ್ದರು.