ಕಡೂರು :ನಡು ರಸ್ತೆಯಲ್ಲೇ ಎಲೆಕ್ಟ್ರಿಕ್ ಬೈಕ್ವೊಂದು ಧಗಧಗನೆ ಹೊತ್ತಿ ಉರಿದ ಘಟನೆ ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಂಚನಹಳ್ಳಿ ಗ್ರಾಮದ ನಂದೀಶ್ ಅವರಿಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಇದಾಗಿದ್ದು, ಒಂದೂವರೆ ವರ್ಷದ ಹಿಂದೆ ಹುಳಿಯಾರದಿಂದ ಸೆಕೆಂಡ್ಹ್ಯಾಂಡ್ ಆಗಿ ಖರೀದಿಸಿದ್ದರು ಎನ್ನಲಾಗಿದೆ.
ತೋಟದಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬೈಕ್ನಿಂದ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಬೈಕ್ನಿಂದ ಕೆಳಗಿಳಿದ ನಂದೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಡು ರಸ್ತೆಯಲ್ಲಿ ಬೈಕ್ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ತಕ್ಷಣ ನೀರು ಸಿಗದೆ, ನೀರಿಗಾಗಿ ಹುಡುಕಾಡುವಷ್ಟರಲ್ಲಿ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.










