ಅತೃಪ್ತರು ವಾಪಸ್ ಬಂದರೆ ರೇವಣ್ಣ ಅವರನ್ನು ನಾನು ರಾಜೀನಾಮೆ ಕೊಡಿಸುತ್ತೇನೆ : ಎ.ಟಿ. ರಾಮಸ್ವಾಮಿ…

282

ಹಾಸನ : ಜಿಲ್ಲೆಯ ಹಳ್ಳಿಮೈಸೂರಿನಲ್ಲಿ ಅತೃಪ್ತ ಶಾಸಕರನ್ನು ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎ.ಟಿ. ರಾಮಸ್ವಾಮಿ ಅವರು ಹೋಗಿದವರು ಒಂದು ಆಪಾದನೆ ಮಾಡಿ ಹೋಗಿದ್ದಾರೆ. ಬಿಜೆಪಿ ಪಕ್ಷಕ್ಕೆ ಹೋಗಬೇಕು ಎನ್ನುವುದು ಅವರ ಮುಖ್ಯ ಕಾರಣ. ಮೈತ್ರಿ ಸರ್ಕಾರದಲ್ಲಿ ಲೋಪದೋಷಗಳು ಇದೆ, ಇಲ್ಲಾ ಎಂದು ಹೇಳಲಾಗುವುದಿಲ್ಲ. ಸಮನ್ವಯತೆ ಇಲ್ಲ ಅಂದರೆ ವಿರೋಧಪಕ್ಷದಲ್ಲಿ ಕೂರೋಣ ಎಂದು ನಾನು ಹಿಂದೆಯೇ ಹೇಳಿದ್ದೆ. ಹೆಚ್.ಡಿ. ರೇವಣ್ಣ ಅವರು ಹೆಚ್ಚು ಸ್ಪೀಡ್ ಆದಾಗ ಹೀಗೆ ಆಗುತ್ತದೆ. ಎಂ.ಟಿ.ಬಿ ನಾಗರಾಜ್ ಅವರು ಎದೆ ಬಗೆದರೂ ಸಿದ್ದರಾಮಣ್ಣ ಎಂದು ಹೇಳುತ್ತಿದ್ದರೂ ಈಗಾ ಎಲ್ಲೋದ್ರು. ಹೊಗಳುಭಟ್ಟ ಎಂಬ ಗಾದೆ ಮಾತಿನಂತೆ ಹೆಚ್ಚು ಹೊಗಳುವವರು ಅಪಾಯಕಾರಿ. ನಾನು ರಾಜಕೀಯದಲ್ಲಿ ಸ್ವಾಸ್ಥ್ಯ ಕಾಪಾಡಿಕೊಂಡು ಬಂದಿದ್ದೇನೆ. ನನಗೆ ನನ್ನ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ. ನನ್ನ ಕ್ಷೇತ್ರವೇ ನನಗೆ ರೆಸಾರ್ಟ್. ಅತೃಪ್ತರು ವಾಪಸ್ ಬಂದರೆ ರೇವಣ್ಣ ಅವರನ್ನು ನಾನು ರಾಜೀನಾಮೆ ಕೊಡಿಸುತ್ತೇನೆ. ರಾಜಕೀಯ ಅಲ್ಲೋಲ ಕಲ್ಲೋಲ ಸ್ಥಿತಿಯಲ್ಲಿದೆ ಎಂದರು.