ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಮುಸಲ್ಮಾನರನ್ನು ಓಲೈಕೆ ಮಾಡುತ್ತಿದೆ : ಈಶ್ವರಪ್ಪ.

63
firstsuddi

ಶಿವಮೊಗ್ಗ : ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಮುಸಲ್ಮಾನರನ್ನು ಓಲೈಕೆ ಮಾಡುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ದೊಂಬಿಗಳಿಗೆ ಕಾರಣವಾಗುತ್ತಿರುವ ವ್ಯಕ್ತಿಗಳಿಗೆ, ಗೂಂಡಾಗಿರಿ ಮಾಡಿದ ಆರೋಪಿಗಳನ್ನು ಸಿಸಿ ಟಿವಿ ದೃಶ್ಯ ಆಧರಿಸಿ ಬಂಧಿಸಲಾಗಿದೆ. ಕೊಲೆ ಮಾಡೋದು, ಅರೆಸ್ಟ್ ಆಗೋದು, ಬೇಲ್ ಮೇಲೆ ಹೊರಗೆ ಬರೋದು ಗೂಂಡಾಗಳಿಗೆ ಮಾಮೂಲಿ ಆಗಿದೆ. ಇದರ ಹಿಂದೆ ಯಾವ ವ್ಯಕ್ತಿ ಇದ್ದಾರೆ. ಯಾವ ಸಂಘಟನೆ ಇದೆ. ಯಾವ ಪಕ್ಷ ಇದೆ ಎನ್ನುವುದರ ಕುರಿತು ತುರ್ತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಪಕ್ಷ ಇದನ್ನು ಖಂಡನೆ ಮಾಡಲು ತಯಾರಿಲ್ಲ. ಕಲ್ಲಂಗಡಿ ಒಡೆದಿದ್ದಕ್ಕೆ ಬೊಬ್ಬೆ ಹಾಕುತ್ತಾರೆ. ಪೊಲೀಸ್ ಅಧಿಕಾರಿ ತಲೆ ಒಡೆದು ಹೋದರೂ ಡಿಕೆಶಿ, ಸಿದ್ದರಾಮಯ್ಯ, ಹೆಚ್ಡಿಕೆ ಮಾತನಾಡಲ್ಲ ಎಂದ ಅವರು, ಎಲ್ಲಾ ಮುಸಲ್ಮಾನರು ರಾಷ್ಟ್ರ ದ್ರೋಹಿಗಳು ಅಂತಾ ಕರೆಯಲ್ಲ. ಇಂತಹ ಕೃತ್ಯದಲ್ಲಿ ಭಾಗವಹಿಸಿದವರು ರಾಷ್ಟ್ರ ದ್ರೋಹಿಗಳು ಎಂದರು.

ಕೋಮು ಗಲಭೆ ಉಂಟು ಮಾಡೋದು ಹಾಗೂ ಸರ್ಕಾರದ ವಿರುದ್ಧ ಪರ್ಸಂಟೇಜ್ ಬಗ್ಗೆ ಆರೋಪ ಮಾಡುವುದನ್ನು ಸಿದ್ದರಾಮಯ್ಯ, ಡಿಕೆಶಿ ಅವರು ದಿನ ಇದೇ ಉದ್ಯೋಗ ಮಾಡಿಕೊಂಡಿದ್ದಾರೆ. ಈ ರೀತಿಯಾಗಿ ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯದ ಜನ ಅವರಿಗೆ ಈಗಾಗಲೇ ಬುದ್ಧಿ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಪಕ್ಷಕ್ಕೆ ಬೇಕಾದ ಸ್ಥಾನವು ಸಿಗಲ್ಲ ಎಂದು ಭವಿಷ್ಯ ನುಡಿದರು.

ಶಾಂತಿಯಿಂದ ಇದ್ದಂತಹ ರಾಜ್ಯವನ್ನು ಕೊಲೆ, ಗಲಭೆ ನಿರ್ಮಾಣ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇದನ್ನು ಉಗ್ರವಾಗಿ ಖಂಡಿಸುತ್ತೇನೆ. ಹುಬ್ಬಳ್ಳಿ ಗಲಭೆಯಲ್ಲಿ ಮೌಲ್ವಿ ಪ್ರಚೋದನೆ ಮಾಡುವ ವಿಡಿಯೋ ನೋಡಿದ್ದೇನೆ. ಪೊಲೀಸರನ್ನು ಹುಡುಕಿ ಕಲ್ಲು ಹೊಡೆದಿದ್ದಾರೆ. ಇದರಿಂದ ಇಡೀ ಹುಬ್ಬಳ್ಳಿಯಲ್ಲಿ ಅಶಾಂತಿ ಉಂಟು ಮಾಡಿದ್ದಾರೆ. ಆರ್ ಎಸ್ ಎಸ್ ಮುರ್ದಾಬಾದ್ ಘೋಷಣೆ ಕೂಗಿದ್ದಾರೆ. ಕಲ್ಲು ತೂರಾಟ ಮಾಡಿರುವ ಪುಂಡರಿಗೆ ನೇರವಾಗಿ ಎದುರಿಸುವ ಶಕ್ತಿ ಹಿಂದೂ ಸಂಘಟನೆಗೆ ಇದೆ. ಆದರೆ ಕಾನೂನು ಕೈಗೆ ತೆಗೆದುಕೊಳ್ಳಲು ಹೋಗಲ್ಲ. ಆ ಮೌಲ್ವಿ ಹೇಡಿಯಂತೆ ಓಡಿ ಹೋಗಿದ್ದಾನೆ. ದೇಶದ್ರೋಹ ಮಾಡಿ, ಗೂಂಡಾಗಿರಿ ಮಾಡಿ ಓಡಿ ಹೋಗಿರುವ ರಾಷ್ಟ್ರ ದ್ರೋಹಿ ಮೌಲ್ವಿಯನ್ನು ಬಂಧಿಸುವಂತೆ ಪ್ರಧಾನಿ ಹಾಗೂ ಅಮಿತ್ ಶಾ ಅವರಲ್ಲಿ ಒತ್ತಾಯಿಸುತ್ತೇನೆ ಎಂದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕನಪುರದವರಾಗಿದ್ದಾರೆ. ಅವರು ಕಾಂಗ್ರೆಸ್ ಏಜೆಂಟ್ ಹಾಗೂ ಕಾಂಗ್ರೆಸ್ ದಾಸ. ಕಾಂಗ್ರೆಸ್ ಅವರ ಜೊತೆ ಸೇರಿ ಸ್ವಾಮೀಜಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಮಿಷನ್ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಸಾಬೀತು ಪಡಿಸಲು ನಿಮ್ಮ ಬಳಿ ಒಂದೇ ಒಂದು ದಾಖಲೆ ಇದ್ದರೆ ಕೊಡಿ. ದಾರಿಯಲ್ಲಿ ಹೋಗುದ ದಾಸರೆಲ್ಲಾ ಆರೋಪ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.