ತಿರುವನಂತಪುರಂ : ಅನೈತಿಕ ಸಂಬಂಧ ಹೊಂದಿದೆ ಎಂದು ಮನೆಯ ಮಾಲಿಕ ಸಾಕುನಾಯಿಯನ್ನು ಮನೆಯಿಂದ ಹೊರ ಹಾಕಿರುವ ಅಪರೂಪದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಚೆಕ್ಕಾಯ್ ಮಾರುಕಟ್ಟೆಯಲ್ಲಿ ಅನಾಥವಾಗಿ ನಿಂತಿದ್ದ ನಾಯಿಯನ್ನು ಪೀಪಲ್ ಫಾರ್ ಎನಿಮಲ್ಸ್ ಸ್ವಯಂ ಸೇವಕ ಶಮೀಮ್ ಅವರು ನಾಯಿಯ ಬಳಿ ಹೋಗಿ ನೋಡಿದಾಗ ಅದರ ಕೊರಳಿಗೆ ಒಂದು ಚೀಟಿಯನ್ನು ಕಟ್ಟಲಾಗಿದ್ದು, ಅದನ್ನು ತೆರೆದು ನೋಡಿದಾಗ ಚೀಟಿಯಲ್ಲಿ “ಇದು ಒಂದು ಅತ್ಯತ್ತಮ ತಳಿಯ ನಾಯಿ, ಒಳ್ಳೆಯ ನಡವಳಿಕೆಯನ್ನು ಹೊಂದಿದೆ. ಇದಕ್ಕೆ ನಾವು ಐದು ದಿನಗಳಿಗೊಮ್ಮೆ ಸ್ನಾನ ಮಾಡಿಸುತ್ತಿದ್ದೆವು. ಇದು ಮೂರು ವರ್ಷದಲ್ಲಿ ಯಾರನ್ನೂ ಕಚ್ಚಿಲ್ಲ. ಇದು ಹೆಚ್ಚಾಗಿ ಹಾಲು, ಬಿಸ್ಕೆಟ್ ಹಾಗೂ ಮೊಟ್ಟೆಯನ್ನು ತಿನ್ನಲು ಇಷ್ಟ ಪಡುತ್ತದೆ. ಆದರೆ ಈ ನಾಯಿ ಪಕ್ಕದ ಮನೆಯ ನಾಯಿಯ ಜೊತೆ ಅನೈತಿಕ ಸಂಬಂಧ ಹೊಂದಿರುವುದನ್ನು ತಿಳಿದು ಮನೆಯಿಂದ ಹೊರ ಹಾಕಲಾಗಿದೆ” ಎಂದು ಚೀಟಿಯಲ್ಲಿ ಬರೆದಿತ್ತು ಎನ್ನಲಾಗಿದೆ.











