ಬೆಂಗಳೂರು : ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಭಜರಂಗಿ 2 ಇಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆಕಂಡಿದೆ.
ಎರಡು ಚಿತ್ರಮಂದಿರಗಳಿಗೆ ವಿಸಿಟ್ ಕೊಟ್ಟ ಶಿವರಾಜ್ ಕುಮಾರ್ ಅವರು, ಬಳಿಕ ಮಾಗಡಿ ಮುಖ್ಯ ರಸ್ತೆಯ ಆಂಜನೇಯನ ಗುಡಿಗೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಆರ್ಶಿವಾದ ಪಡೆದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲವು ದಿನಗಳ ಬಳಿಕ ಚಿತ್ರ ತೆರೆ ಕಂಡಿದೆ. ಅಭಿಮಾನಿಗಳು ತುಂಬಾ ಚೆನ್ನಾಗಿ ರೆಸ್ಪಾನ್ಸ್ ಮಾಡಿದ್ದಾರೆ. ಜನರ ಅಭಿಮಾನವನ್ನು ನೋಡಿದರೆ ಸಾಕಷ್ಟು ಸಂತೋಷವಾಗತ್ತಿದೆ. ನನ್ನ ಹಾಗೂ ಹರ್ಷ ಅವರ ಕಾಂಬಿನೇಷನಲ್ಲಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂದರು.










