ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ಭವನ ನಿರ್ಮಾಣಕ್ಕೆ ಶೀಘ್ರ ಭೂಮಿ ಮಂಜೂರು : ಯೋಗಿ ಆದಿತ್ಯನಾಥ್ ಭರವಸೆ…

110
firstsuddi

ಉಡುಪಿ: ಅಯೋಧ್ಯೆ ಸೇರಿದಂತೆ ಉತ್ತರ ಭಾರತ ಪ್ರವಾಸದಲ್ಲಿರುವ ಉಡುಪಿ ಪೇಜಾವ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಭೇಟಿ ಮಾಡಿದರು. ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಅಯೋಧ್ಯೆಯಲ್ಲಿ ಭವಿಷ್ಯದಲ್ಲಿ ರಾಮಮಂದಿರಕ್ಕಾಗಿ ತೆರಳುವ ರಾಜ್ಯದ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಭವ್ಯ ಕರ್ನಾಟಕ ಯಾತ್ರಿ ಭವನ ನಿರ್ಮಿಸಲು ಭೂಮಿ ಒದಗಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಪತ್ರ ಬರೆದು ಮನವಿ ಮಾಡಿದ್ದರು .

ಯೋಗಿಯವರನ್ನು ಭೇಟಿ ಮಾಡಿದ ಶ್ರೀ ಪೇಜಾವರ ಶ್ರೀಗಳು ಈ ವಿಷಯವನ್ನು ಯೋಗಿಯವರ ಸ್ಮರಣೆಗೆ ತಂದಿದ್ದರು . ಅದಕ್ಕೆ ಪ್ರತಿಕ್ರಿಯಿಸಿದ ಯೋಗಿಯವರು ಆದಷ್ಟು ಶೀಘ್ರ ಭೂಮಿಯನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ .