ಆಂಧ್ರದ ಪಲ್ನಾಡು ಜಿಲ್ಲೆಯಲ್ಲಿ ಭೀಕರ ಅಪಘಾತ ; 6 ಮಂದಿ ಸಾವು…

73
firstsuddi

ಹೈದರಾಬಾದ್ : ನಿಂತಿದ್ದ ಲಾರಿಗೆ ಮಿನಿವ್ಯಾನ್ ಡಿಕ್ಕಿ ಹೊಡೆದ ಪರಿಣಾಮ 6 ಜನ ಸಾವನ್ನಪ್ಪಿದ ಘಟನೆ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯ ರೆಂಟಚಿಂತಲ ಎಂಬಲ್ಲಿ ನಡೆದಿದೆ.

ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಗಂಭೀರವಾಗಿ ಗಾಯಗೊಂಡಿದ್ದ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಗದೇ ಸಾವನ್ನಪ್ಪಿದ್ದಾರೆ. ಮೃತರನ್ನು ಕೋಟೇಶ್ವರಿ (45), ರೋಶಮ್ಮ (65), ರಮಾದೇವಿ (50), ಕೋಟಮ್ಮ (70), ರಮಣ (50) ಮತ್ತು ಲಕ್ಷ್ಮೀನಾರಾಯಣ (35) ಎಂದು ಗುರುತಿಸಲಾಗಿದೆ. ಇತರೆ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗುಂಟೂರು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ನಿನ್ನೆಯಷ್ಟೇ ಉತ್ತರ ಪ್ರದೇಶದ ಖೇರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ 8 ಜನ ಮೃತಪಟ್ಟಿದ್ದರು. ಅಯೋಧ್ಯೆಗೆ ಟೆಂಪೋ ಟ್ರಾವೆಲರ್‌ ನಲ್ಲಿ ಬೀದರ್‌ನ 16 ಜನರು ಪ್ರಯಾಣ ಬೆಳೆಸುತ್ತಿದ್ದರು. ಈ ಟೆಂಪೋ ಟ್ರಾವೆಲರ್‌ ಮೋತಿಪುರ್ ಪ್ರದೇಶದ ನಾನಿಹಾ ಮಾರುಕಟ್ಟೆಯಲ್ಲಿ ಎದುರಿನ ಲೇನ್ ಗೆ ಪ್ರವೇಶಿಸಿದೆ. ಈ ವೇಳೆ ಟೆಂಪೋ ಟ್ರಾವೆಲರ್‌ ಮತ್ತು ಟ್ರಕ್ ನಡುವೆ ಭೀರಕ ಅಪಘಾತ ಅಪಘಾತ ಸಂಭವಿಸಿದ್ದು, ಮೂವರು ಮಹಿಳೆಯರು ಸೇರಿದಂತೆ 7 ಜನ ಮೃತಪಟ್ಟಿದ್ದರು. 9 ಮಂದಿಗೆ ಗಂಭೀರ ಗಾಯವಾಗಿತ್ತು.

ನಿನ್ನೆ ತಡರಾತ್ರಿ ಯುವತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸದ್ಯ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ ಹಿನ್ನೆಲೆ ಬೀದರ್ ಗೆ ಇಂದು ಮೃತದೇಹಗಳು ರವಾನೆವಾಗುತ್ತಿವೆ. ಇಂದು ಅಪರಾಹ್ನ ಮೃತದೇಹಗಳು ಬೀದರ್ ತಲುಪಲಿದ್ದು, ಮಧ್ಯಾಹ್ನ 1 ಗಂಟೆಗೆ ಲಕ್ನೋದಿಂದ ವಿಮಾನದ ಮೂಲಕ ಹೈದ್ರಾಬಾದ್ಗೆಹ ಮೃತದೇಹಗಳು ತಲುಪಿಲಿವೆ.