ಮಂಗಳೂರು : ಆಯತಪ್ಪಿ ನದಿಗೆ ಬಿದ್ದ ಮುಸ್ಲಿಂ ಯುವಕನನ್ನು ಹಿಂದೂ ಯುವಕನೊಬ್ಬ ರಕ್ಷಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರಪಳ್ಳತ್ತಡ್ಕ ಎಂಬಲ್ಲಿ ನಡೆದಿದೆ.
ಇಲ್ಲಿನ ಸೇತುವೆಯೊಂದರಲ್ಲಿ ಸಿಲುಕಿದ್ದ ಮರವನ್ನು ತೆರವುಗೊಳಿಸುವ ವೇಳೆ ಕ್ರೈನ್ ಆಪರೇಟರ್ ಶರೀಫ್ ಎಂಬವರು ಆಯತಪ್ಪಿ ನದಿಗೆ ಬಿದ್ದಿದ್ದಾರೆ. ಹೀಗೆ ನದಿಗೆ ಬಿದ್ದ ಷರೀಫ್ ನೀರಿನ ರಭಸಕ್ಕೆ ಈಜಲು ಸಾಧ್ಯವಾಗದೆ ಮುಳುಗುತ್ತಿರುವುದನ್ನು ಗಮನಿಸಿದ ಸೋಮಶೇಖರ್ ಕಟ್ಟೆಮನೆ ಎಂಬವರು ತಕ್ಷಣ ನದಿಗೆ ಹಾರಿ ಷರೀಫ್ ಅವರನ್ನು ಸುಮಾರು 5 ನಿಮಿಷಗಳ ಕಾಲ ಹಿಡಿದುಕೊಂಡು ನೀರಿನಲ್ಲಿ ನಿಂತರು. ನಂತರ ಹಗ್ಗ ಬಳಸಿ ಜೆಸಿಬಿ ಮುಖಾಂತರ ಅವರನ್ನು ಮೇಲಕ್ಕೆತ್ತಲಾಯಿತು.
ಸದ್ಯ ಸೋಮಶೇಖರ್ ಕಟ್ಟೆಮನೆ ಅವರ ಕಾರ್ಯಕ್ಕೆ ಜಿಲ್ಲೆಯಾದ್ಯಾಂತ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.










