ಇಂದು ಬಕ್ರೀದ್ ಸಂಭ್ರಮ ; ಶುಭ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್.

99
firstsuddi

ನವದೆಹಲಿ : ಇಂದು ಎಲ್ಲೆಡೆ ಈದ್-ಉಲ್-ಅಧಾವನ್ನು ಆಚರಿಸಲಾಗುತ್ತಿದ್ದು, ಈ ದಿನದಂದು ಆಡನ್ನು ಬಲಿ ನೀಡಲಾಗುತ್ತದೆ. ಅದಕ್ಕಾಗಿಯೇ ಇದನ್ನು ದೇಶದಲ್ಲಿ ಬಕ್ರೀದ್ ಎಂದೂ ಕರೆಯುತ್ತಾರೆ.

 ಮುಸ್ಲಿಂ ಬಾಂಧವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಭ ಕೋರಿದ್ದಾರೆ.

ಸರ್ವರಿಗೂ ಈದ್ ಮುಬಾರಕ್ ಎಂದು ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಒಳಿತಿಗಾಗಿ ಸಹಾನುಭೂತಿ, ಸೌಹಾರ್ದ ಮನೋಭಾವವನ್ನು ಆ ಅಲ್ಲಾಹನು ಕರುಣಿಸಲಿ ಎಂದು ಹಾರೈಸಿದ್ದಾರೆ.

ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರು ಬಕ್ರೀದ್ ಹಬ್ಬದ ವಿಶೇಷವಾಗಿ ದೇಶದ ಮುಸ್ಲಿಮರಿಗೆ ಉರ್ದು ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದು, ಜನರು ಕೊವಿಡ್-19 ಸುರಕ್ಷತಾ ಮಾರ್ಗ ಸೂಚಿಗಳನ್ನು ಅನುಸರಿಸುವಂತೆ ಹೇಳಿದ್ದಾರೆ.