ಉತ್ತರ ಪ್ರದೇಶದಲ್ಲಿ ಅಪ್ರಾಪ್ತನಿಂದ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ.

40
Representational image | Shutterstock

ಲಖನೌ: 17 ವರ್ಷದ ಅಪ್ರಾಪ್ತ ಯುವಕ 5 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬಜಾರ್ ಖಾಲಾ ಪ್ರದೇಶದಲ್ಲಿ ನಡೆದಿದೆ.  ಬಾಲಕಿ ತನ್ನ ತಂದೆ ತಾಯಿಯರೊಂದಿಗೆ ಉತ್ತರ ಪ್ರದೇಶದ ಬಜಾರ್ ಖಲಾ ಪ್ರದೇಶದಲ್ಲಿ ವಾಸಿಸುತ್ತಿದ್ದಾಳೆ. ಭಾನುವಾರ ಮನೆಯ ಹೊರಗೆ ಆಟವಾಡುತ್ತಿದ್ದಾಗ, ಪಕ್ಕದ ಮನೆಯಲ್ಲಿದ್ದ ಆರೋಪಿ ಅಪ್ರಾಪ್ತ ಯುವಕ ಆಕೆಯ ಬಳಿಗೆ ಬಂದಿದ್ದ. ಬಾಲಕಿಗೆ ಚಿಪ್ಸ್ ಪ್ಯಾಕೆಟ್ ಆಸೆ ತೋರಿಸಿ ಬಾಲಕಿಯನ್ನು ಸಮೀಪದ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಮಗಳು ಕಾಣದೇ ಇದ್ದ ಪೋಷಕರು ಹುಡುಕಾಟ ನಡೆಸಿದಾಗ ಪಕ್ಕದ ಮನೆಯಿಂದ ಅಳುವುದು ಕೇಳಿ ಬಾಗಿಲು ತೆಗೆಯಲು ಹೋದಾಗ ಲಾಕ್ ಆಗಿತ್ತು. ಕರೆದಾಗ ಯಾರೂ ಬಾಗಿಲು ತೆರೆಯದೇ ಇದ್ದಾಗ ಬಾಗಿಲು ಒಡೆಯಲಾಗಿದೆ. ಒಳಗೆ ಹೋಗಿ ನೋಡಿದಾಗ ಬಾಲಕಿ ಅರೆಪ್ರಜ್ಞಾ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ಜತೆಗೆ ಆರೋಪಿ ಕೂಡ ಕೋಣೆಯಲ್ಲಿದ್ದು ತಕ್ಷಣವೇ ಆತನನ್ನು ಸೆರೆ ಹಿಡಿದು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿ, ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಿದ್ದಾರೆ. ಈ ಅತ್ಯಾಚಾರ ಸಂಬಂಧ ಪ್ರಕರಣ ದಾಖಲಾಗಿದ್ದು, ಬಾಲಾಪರಾಧಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.