ಊಟದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!

38
firstsuddi

ಹಾಸನ : ಊಟಕ್ಕೆ ಕರೆಯಲಿಲ್ಲ ಎಂಬ ಕಾರಣಕ್ಕೆ ಆರಂಭವಾದ ಜಗಳ, ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಪುರ್ಲೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಶರತ್ (28) ಕೊಲೆಯಾದ ಯುವಕ. ನಟರಾಜ್ ಆರೋಪಿಯಾಗಿದ್ದಾನೆ.

ಜನವರಿ 16 ರಂದು ಶರತ್ ಸಂಬಂಧಿಕರು ಚೌಡೇಶ್ವರಿ ದೇಗುಲದಲ್ಲಿ ಹರಕೆ ಕೊಟ್ಟು ಊಟ ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ನಟರಾಜ್ ನನ್ನು ಆಹ್ವಾನಿಸಿರಲಿಲ್ಲ. ನಮ್ಮನ್ನು ಯಾಕೆ ಊಟಕ್ಕೆ ಕರೆದಿಲ್ಲ ಎಂದು ನಟರಾಜ್ ತನ್ನ ಗೆಳೆಯ ಶರತ್ ಜೊತೆ ಜಗಳ ಮಾಡಿದ್ದಾನೆ. ಈ ವೇಳೆ ಗ್ರಾಮಸ್ಥರು ಜಗಳ ಬಿಡಿಸಿ ಕಳುಹಿಸಿದ್ದರು.

ಇದೇ ವಿಚಾರವಾಗಿ ಕೋಪಗೊಂಡು ಭಾನುವಾರ ರಾತ್ರಿ ಮನೆಗೆ ನುಗ್ಗಿದ ನಟರಾಜ್ ಮತ್ತು ಸ್ನೇಹಿತರು ಮಾರಕಾಸ್ತ್ರಗಳಿಂದ ಶರತ್ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಶರತ್ ನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.