ಎಐಎಂಐಎಂನ ನಾಲ್ವರು ಶಾಸಕರು ಆರ್‌ಜೆಡಿ ಸೇರ್ಪಡೆ…

61
firstsuddi

ಪಾಟ್ನಾ: ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ)ನ ನಾಲ್ವರು ಶಾಸಕರು ಆರ್ ಜೆಡಿ (ರಾಷ್ಟ್ರೀಯ ಜನತಾ ದಳ) ಸೇರಿದ್ದಾರೆ.

ಎಐಎಂಐಎಂ ನ ಶಾಸಕರಾದ ಶಹನವಾಜ್, ಮೊಹಮ್ಮದ್ ಅನ್ಜರ್ ನೈಮೈ, ಮುಹಮ್ಮದ್ ಇಝಾರ್ ಅಸ್ಫಿ ಮತ್ತು ಸೈಯದ್ ರುಕ್ನುದ್ದೀನ್ ಆರ್ ಜೆಡಿ ಸೇರ್ಪಯಾಗಿದ್ದಾರೆ. ಈ ನಾಲ್ವರು ಶಾಸಕರ ಸೇರ್ಪಡೆಯಿಂದ ಬಿಹಾರದಲ್ಲಿ ಆರ್ ಜೆಡಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಬಿಹಾರದ ಐವರು ಎಐಎಂಐಎಂ ಶಾಸಕರ ಪೈಕಿ ನಾಲ್ವರು ಇಂದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಹೇಳಿದ್ದಾರೆ.