ಮಂಗಳೂರು: ಮಂಗಳೂರು ನಗರದ ಕದ್ರಿ ( ಪಶ್ಚಿಮ) ಪೊಲೀಸ್ ಠಾಣೆ ಸ್ಯಾಮ್ ಪೀಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವನೊಂದಿಗೆ ವ್ಯವರಿಸುತ್ತಿದ್ದ ಮತ್ತು NCIB ತನಿಖಾಧಿಕಾರಿಗಳೆಂದು ಪೋಸ್ ಕೊಟ್ಟು ಜನರಿಗೆ ವಂಚಿಸುತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬಂಧೀತರನ್ನು ನಾಗರಾಜ N.S. 39 ವರ್ಷ. ನಾಗರಬಾವಿ ಬೆಂಗಳೂರು ಮತ್ತು ರಾಘವೇಂದ್ರ 31 ವರ್ಷ ನಾಗರಬಾವಿ ಬೆಂಗಳೂರು ಎಂದು ಗುರುತಿಸಲಾಗಿದೆ/
ಆರೋಪಿತರಿಂದ NCIB ಬಾವುಟ, ಬೋರ್ಡ್, MLC PASS ಇರುವ SCORPIO KA02 MD7935 ಕಾರನ್ನು, ID ಕಾರ್ಡ್ಗಳನ್ನು, ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ವಶಪಡಿಸಿದೆ.MLC CR ಮನೋಹರ್ ರವರ ವಿಧಾನ ಸೌಧ ವಾಹನ ಪಾಸ್ ನ್ನು ಕೂಡ ಮೇಲ್ಕಂಡ ಆರೋಪಿಗಳು ದುರುಪಯೋಗ ಪಡಿಸಿದ್ದು ಈ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ.
ರಾಘವೇಂದ್ರ ಸ್ವಾಮೀಜಿ , ಕಾಶಿ ಮಠ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಬಾಬ್ತು ಆಂಧ್ರ ಪ್ರದೇಶದ CID ತನಿಖಾಧಿಕಾರಿಗಳು ಆಗಮಿಸಿರುತ್ತಾರೆ.ದಿಬ್ಬುರಲ್ಲಿ ಪೋಲಿಸ್ ಸ್ಟೇಷನ್ ಚಿಕ್ಕಬಳ್ಳಾಪುರ ಜಿಲ್ಲೆಯ ಪೋಲಿಸ್ ಅಧಿಕಾರಿಗಳು ರಿಯಾಜ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲೀಂ ಬಾಬ ಪಟೇಲ್ ಮಹಾರಾಷ್ಟ್ರ ಇವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.










