ಎಸ್‍ಬಿಐ ಬ್ಯಾಂಕ್‍ನಲ್ಲಿ 15 ಕೋಟಿಯ ಚಿನ್ನ ಲೂಟಿ; ದುಷ್ಕರ್ಮಿಗಳು ಪರಾರಿ.

48

ತೆಲಂಗಾಣ: ವರಂಗಲ್ ಜಿಲ್ಲೆಯ ರಾಯಪರ್ತಿ ಮಂಡಲದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ದುಷ್ಕರ್ಮಿಗಳು ಅತಿದೊಡ್ಡ ದರೋಡೆ ಮಾಡಿದ್ದಾರೆ. ಅಂದಾಜು ₹14.94 ಕೋಟಿ ಮೌಲ್ಯದ ಸುಮಾರು 19 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಬ್ಯಾಂಕ್‍ನ ಸುರಕ್ಷತಾ ಲಾಕರ್‌ಗಳನ್ನು ಗುರಿಯಾಗಿಸಿಕೊಂಡು ಕಳ್ಳತನವಾಗಿದ್ದು, ಸುಮಾರು 500 ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ಯಾಂಕ್‍ನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ದರೋಡೆಕೋರರು ಈ ಸಮಯವನ್ನೇ ದುರ್ಬಳಕೆ ಮಾಡಿಕೊಂಡು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಅವರು ಈ ಕಳವು ಗೊತ್ತಾಗದಿರುವಂತೆ ಯೋಜನೆ ರೂಪಿಸಿ ಈ ಕಳ್ಳತನ ಮಾಡಲಾಗಿದೆ. ಇದಕ್ಕಾಗಿ ಅವರು ಅಲಾರ ಅಥವಾ ಅಲರ್ಟ್ ಕರೆ ಗಂಟೆಗಳ ತಂತಿಗಳನ್ನು ಕತ್ತರಿಸುವ ಮೂಲಕ ದರೋಡೆ ಕೃತ್ಯಕ್ಕೆ ಇಳಿದಿದ್ದಾರೆ. ಕಿಟಕಿಯ ಕಬ್ಬಿಣದ ಗ್ರಿಲ್ ಗಳನ್ನು ಕತ್ತರಿಸಿ ಆ ಮೂಲಕ ಬ್ಯಾಂಕ್‍ನ ಒಳ ಪ್ರವೇಶ ಮಾಡಿ ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಅಷ್ಟೇ ಅಲ್ಲ ಈ ಕೃತ್ಯದ ಯಾವುದೇ ಕುರುಹು ಉಳಿಯದಂತೆ ಸಾಕ್ಷ್ಯ ನಾಶಕ್ಕಾಗಿ ಹಾರ್ಡ್ ಡಿಸ್ಕ್ ಕೂಡಾ ಕದ್ದಿದ್ದಾರೆ.