ಎಸ್‍ಪಿ ನಾಯಕ ಅಜಂ ಖಾನ್ ಜೈಲಿನಿಂದ ಬಿಡುಗಡೆ…

56
firstsuddi

ನವದೆಹಲಿ : ಸುಮಾರು 27 ತಿಂಗಳ ಸೆರೆವಾಸದ ಬಳಿಕ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಜೈಲಿನಿಂದ ಇಂದು ಬಿಡುಗಡೆಯಾಗಿದ್ದಾರೆ. ನಿನ್ನೆ ಅಜಂ ಖಾನ್ ಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.

ಅಜಂ ಖಾನ್ ವಿವಿಧ ಅಪರಾಧ ಮತ್ತು ಸಿವಿಲ್ 88 ಪ್ರಕರಣಗಳನ್ನು ಎದುರಿಸುತ್ತಿದ್ದರು. ಇನ್ನೂ ಅಜಂ ಖಾನ್ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಅವರನ್ನು ಬರಮಾಡಿಕೊಳ್ಳಲು ಪ್ರಗತಿಶೀಲ ಸಮಾಜವಾದಿ ಪಕ್ಷದ ಮುಖ್ಯಸ್ಥ ಶಿವಪಾಲ್ ಯಾದವ್ ಮತ್ತು ಅಜಂ ಖಾನ್ ಪುತ್ರರಾದ ಹಬೀಬ್ ಅಜಂ ಮತ್ತು ಅಬ್ದುಲ್ಲಾ ಅಜಂ ಉತ್ತರ ಪ್ರದೇಶದ ಸೀತಾಪುರ ಜೈಲಿಗೆ ಬಂದಿದ್ದರು.