ಐಸಿಸಿ ಜೊತೆ ನಂಟು ಶಂಕೆ ; ಭಟ್ಕಳದಲ್ಲಿ ಮೂವರು ವಶಕ್ಕೆ…

143
firstsuddi

ಕಾರವಾರ : ಐಸಿಸಿ ಜೊತೆ ನಂಟು ಶಂಕೆ ಹಿನ್ನಲೆ ತಾಲ್ಲೂಕಿನ ಸಾಗರ ರಸ್ತೆ ಹಾಗೂ ಉಮರ್ ಸ್ಟ್ರೀಟ್ ನಲ್ಲಿರುವ ಎರಡು ಮನೆಗಳ ಮೇಲೆ ಎನ್ ಐಎ ತಂಡ ಇಂದು ಏಕಕಾಲಕ್ಕೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದೆ.

ಭಟ್ಕಳದ ಅಮೀನ್ ಜುವೇಬ್ ಹಾಗೂ ಜವಾದ್ ಇಬ್ಬರನ್ನು ತೀವ್ರ ತನಿಖೆ ನಡೆಸುತ್ತಿದ್ದು, ಈ ಹಿಂದೆ ದುಬೈ ನಲ್ಲಿ ಬಂಧನಕ್ಕೊಳಕ್ಕಾಗಿದ್ದ ಭಯೋತ್ಪಾದ ಓರ್ವನ ಸಂಬಂಧಿಯನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ನಿನ್ನೆಯಿಂದಲೇ ಭಟ್ಕಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಕ್ಕಾಂ ಹೂಡಿದ್ದು, ದಾಳಿ ವೇಳೆ ತಾಲ್ಲೂಕಿನ ಹಲವೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.