ಒಂದು ಸಾವಿರ ಹಣಕ್ಕಾಗಿ ಸ್ನೇಹಿತನನ್ನೇ ಕೊಂದ ವ್ಯಕ್ತಿ…

174
firstsuddi

ಬೀದರ್ : 1 ಸಾವಿರ ಹಣವನ್ನು ವಾಪಸ್ ನೀಡದ್ದಕ್ಕೆ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೇ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಗರದ ಮೈಲೂರ್ ನಲ್ಲಿ ನಡೆದಿದೆ. ಸ್ವಾಮಿದಾಸ್ ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ರವಿ ಕೊಲೆ ಆರೋಪಿಯಾಗಿದ್ದಾರೆ. ಮೃತ ಸ್ವಾಮಿದಾಸ್ ಅವರು ರವಿ ಅವರ ಬಳಿ 1 ಸಾವಿರ ರೂ. ಸಾಲವನ್ನು ಪಡೆದಿದ್ದರು. ಈ ಸಾಲವನ್ನು ವಾಪಸ್ ನೀಡುವಂತೆ ರವಿ ಅವರು ಸ್ವಾಮಿದಾಸ್ ಅವರಲ್ಲಿ ಕೇಳಿದ್ದಾರೆ. ಆದರೆ ಸ್ವಾಮಿದಾಸ್ ಅವರು ಹಣವನ್ನು ನೀಡದೆ ಇದ್ದುದರಿಂದ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ರವಿ ಅವರು ಸ್ವಾಮಿದಾಸ್ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಕೂಡಲೇ ಸ್ಥಳೀಯರು ಸ್ವಾಮಿದಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.