ಒಂದೇ ಸಿರಿಂಜ್​ನಿಂದ 39 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದ್ದ ವ್ಯಕ್ತಿ ಬಂಧನ…

60
firstsuddi

ಭೋಪಾಲ್ : ಖಾಸಗಿ ಶಾಲೆಯೊಂದರಲ್ಲಿ 39 ಮಕ್ಕಳಿಗೆ ಒಂದೇ ಸಿರಿಂಜ್ ನಿಂದ ಲಸಿಕೆ ನೀಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಜಿತೇಂದ್ರ ಅಹಿರ್ವಾರ್ ಎಂಬಾತನೇ ಒಂದೇ ಸಿರಿಂಜ್ ಬಳಸಿ ಹಲವಾರು ಮಕ್ಕಳಿಗೆ ಲಸಿಕೆ ನೀಡಿದ ಆರೋಪಿ. ನಗರದ ಜೈನ್ ಹೈಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಏರ್ಪಡಿಸಲಾಗಿದ್ದ 39 ವಿದ್ಯಾರ್ಥಿಗಳಿಗೆ ಒಂದೇ ಸಿರಿಂಜ್ ಬಳಸಿ ಲಸಿಕೆ ನೀಡಿದ ಘಟನೆ ನಡೆದಿತ್ತು.

ಅಹಿರ್ವಾರ್ ಸ್ಥಳೀಯ ಖಾಸಗಿ ನರ್ಸಿಂಗ್ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆಯಿಂದ ಈತನಿಗೆ ಲಸಿಕೆ ನೀಡುವ ಟ್ರೇನಿಂಗ್ ನೀಡಲಾಗಿತ್ತು ಎಂದು ಸಗರ್ ಜಿಲ್ಲೆಯ ಮುಖ್ಯ ಆರೋಗ್ಯ ಮತ್ತು ವೈದ್ಯಾಧಿಕಾರಿ ಡಾ. ಡಿಕೆ ಗೋಸ್ವಾಮಿ ಹೇಳಿದ್ದಾರೆ.

ಈ ಮಧ್ಯೆ ಬಂಧಿತ ವ್ಯಾಕ್ಸಿನ್ ನೀಡಿದ ಆರೋಪಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಆತನ ವಿಭಾಗ ಮುಖ್ಯಸ್ಥರು ಆತನನ್ನು ಕಾರಿನಲ್ಲಿ ಶಾಲೆಯವರೆಗೆ ಕರೆದುಕೊಂಡು ಬಂದು ಒಂದೇ ಸಿರಿಂಜ್​ನಲ್ಲೇ ಎಲ್ಲರಿಗೂ ಲಸಿಕೆ ನೀಡುವಂತೆ ತಿಳಿಸಿದ್ದರು ಎಂದು ವಿಡಿಯೋದಲ್ಲಿ ಆಪಾದನೆ ಮಾಡಿದ್ದಾನೆ.

ಜಿತೇಂದ್ರ ಅವರ ಆರೋಪಗಳ ಬಗ್ಗೆ ಸಿಎಂಎಚ್ ಒ ಡಾ.ಗೋಸ್ವಾಮಿ ಅವರನ್ನು ಕೇಳಿದಾಗ, ಇದು ತನಿಖೆಯ ವಿಷಯವಾಗಿದೆ. ಘಟನೆಗೆ ಕಾರಣರಾದ ಜಿಲ್ಲಾ ವ್ಯಾಕ್ಸಿನೇಷನ್ ಅಧಿಕಾರಿಯನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಪೊಲೀಸರು ನಿನ್ನೆ ಸಂಜೆ ಸಗರ್ ನಗರದಿಂದ ಜಿತೇಂದ್ರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದರು.