ಕಳಸ : ಚರಂಡಿಗಳ ಸ್ವಚ್ಚತೆ ಮಾಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ವಿರುದ್ಧ ಹಳುವಳ್ಳಿ ಗ್ರಾಮಸ್ಥರ ಆರೋಪ…

188
firstsuddi

ಕಳಸ : ಲೋಕೋಪಯೋಗಿ ಇಲಾಖೆಯು ಕಳಸ ತಾಲ್ಲೂಕಿನ ಮುಖ್ಯ ರಸ್ತೆಗಳ ಇಕ್ಕೆಲಗಳ ಚರಂಡಿಯನ್ನು ಸ್ವಚ್ಚ ಮಾಡಿದರೂ ಕೂಡ ಹಳುವಳ್ಳಿ ಭಾಗದಲ್ಲಿ ಸ್ವಚ್ಚ ಮಾಡಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳಸದಿಂದ ಹಳುವಳ್ಳಿ ತನಕ ಜೆಸಿಬಿಯಿಂದ ಚರಂಡಿಯಲ್ಲಿದ್ದ ಹೂಳನ್ನು ತೆಗೆದು ನೀರು ಸರಾಗವಾಗಿ ಹರಿದು ಹೋಗಲು ಕಾಮಗಾರಿಯನ್ನು ಮಾಡಿದ್ದಾರೆ. ಆದರೆ ಹಳುವಳ್ಳಿ ಭಾಗದಲ್ಲಿ ಮಾತ್ರ ಕಾಮಗಾರಿ ಮಾಡದೆ ಹಾಗೆಯೇ ಬಿಡಲಾಗಿದೆ. ಇದರಿಂದ ನಿನ್ನೆ ಸುರಿದ ಮಳೆಗೆ ನೀರು ರಸ್ತೆಯಲ್ಲಿಯೇ ಹರಿದು ಹೋಗಿ ರಸ್ತೆ ಹಾಳಾಗುತ್ತಿದೆ.ಅಕ್ಕ ಪಕ್ಕದಲ್ಲಿದ್ದ ಮನೆಗಳಿಗೂ ನೀರು ನುಗ್ಗುತ್ತದೆ.
ಕೇವಲ ಹಳುವಳ್ಳಿ ಬಾಗದಲ್ಲಿ ಮಾತ್ರ ಚರಂಡಿಯನ್ನು ಸ್ವಚ್ಚ ಮಾಡದೆ ಹೋಗಿರುವ ದುರುದ್ದೇಶವೇನು? ಕೂಡಲೇ ಸಂಬಂದಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕಳಸ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಕಾಶ್ ಕುಮಾರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಇಂಜಿನೀಯರ್ ಮಂಜುನಾಥ್ ಕಾಮಗಾರಿ ಮಾಡದೆ ಉಳಿದಿರುವ ಸ್ಥಳದಲ್ಲಿ ಪೈಪ್ ಲೈನ್ ಇದೆ.ಅಲ್ಲಿ ಕೆಲವರು ಕಾಮಗಾರಿ ಮಾಡಿ ಅಂತಾರೆ ಇನ್ನು ಕೆಲವರು ಬೇಡ ಅಂತಾರೆ ಆದ್ದರಿಂದ ಆ ಪ್ರದೇಶದಲ್ಲಿ ಬಿಡಲಾಗಿದೆ.ಸಾರ್ವಜನಿಕರ ಒಮ್ಮತದ ತೀರ್ಮಾನ ಇದ್ದರೆ ಅಲ್ಲಿ ಮತ್ತೆ ಕಾಮಗಾರಿ ಮಾಡಿಸುತ್ತೇನೆ ಎಂದು ತಿಳಿಸಿದ್ದಾರೆ.