ಕಳಸ : ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಕೊರೊನಾ ನಿರ್ಮೂಲನೆಗೆ ಸಹಕರಿಸಿದ ಪತ್ರಿಕಾ ರಂಗದ ಮಿತ್ರರಿಗೆ ಗೌರವ ಸಮರ್ಪಣೆ…

356
firstsuddi

ಕಳಸ : ಕೊರೋನಾ ನಿರ್ಮೂಲನೆ ಸಹಕರಿಸಿದ ಪತ್ರಿಕಾ ರಂಗ ಸೇರಿದಂತೆ ಆಶಾ ಕಾರ್ಯಕರ್ತೆಯರು, ವೈದ್ಯರು, ಪೊಲೀಸರು, ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಿರುವ ಕಾರ್ಯ ಸಾದು ಸಂತರು ಮಾಡಿದ ನೂರು ವರ್ಷಗಳ ತಪಸ್ಸಿಗೆ ಸಮ ಎಂದು ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮಿ ಬೇರುಗಂಡಿ ಮಠ ಹಾಂದಿ ಇವರು ಹೇಳಿದರು.
ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಟಾನ ಗೋಣಿಬೀಡು ಇವರ ವತಿಯಿಂದ ಕಳಸದಲ್ಲಿ ಗುರುವಾರ ನಡೆದ ಕೊರೋನ ನಿರ್ಮೂಲನೆಗೆ ಸಹಕರಿಸಿದ ಪತ್ರಿಕಾ ರಂಗದ ಮಿತ್ರರಿಗೆ ಗೌರವ ಸಮರ್ಪನೆ ಹಾಗೂ ಗೀತಗಾಯನ ಭರತನಾಟ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಡೀ ದೇಶದ ಸುದ್ಧಿಯನ್ನು ಮಹಾ ಮಾರಿ ಕೊರೋನದ ಮದ್ಯೆ ಮನೆ ಮನೆಗೆ ತಲುಪಿಸುವಂತ ಕಾರ್ಯವನ್ನು ಮಾಡುತ್ತಿರುವ ಪತ್ರಿಕಾ ವರದಿಗಾರರು ಮತ್ತು ವಿತರಕರ ಕೆಲ ಶ್ಲಾಘನಿಯ.ಚಳಿ ಗಾಳಿ ಮಳೆ ಎನ್ನದೆ ಈ ಕೆಲಸವನ್ನು ಮಾಡುವುದು ಸುಲಭದ ಮಾತಲ್ಲ.ನಾವು ಮಹಾತ್ಮನಾಗಬೇಕಾದರೆ ಸಾಮಾಣ್ಯ ಜನರು ಕೂಡ ಮಾನವೀಯತೆಯ ಗುಣವನ್ನು ಬೆಳೆಸಿಕೊಳ್ಳಬೇಕು.ಇಂತಹ ಗುಣವನ್ನು ಕೊರೋಣ ಸಂದರ್ಭದಲ್ಲಿ ಹಲವಾರು ಜನರು ಬೆಳೆಸಿಕೊಂಡು ಮಹಾತ್ಮರಾಗಿದ್ದಾರೆ.ಕೊರೋನಕ್ಕೆ ಭಯಪಡಬೇಡಿ ಮತ್ತು ಮೈಮರೆಯಬೇಡಿ ಎಂದು ಹೇಳಿದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಕೆಸವಳಲು ಮಾತನಾಡಿ ಒಂದು ಸುದ್ಧಿಯನ್ನು ಓದುಗನಿಗೆ ತಲುಪಿಸಬೇಕಾದರೆ ಅದರಲ್ಲಿ ಹಲವಾರು ಜನರ ಪರಿಶ್ರಮವಿದೆ.ಇಂದಿನ ಪರಿಸ್ಥಿತಿಯಲ್ಲಿ ಗ್ರಾಮೀಣ ಪತ್ರಕರ್ತರ ಬದುಕು ತೀರಾ ಸಂಕಷ್ಟದಲ್ಲಿದೆ.ಇಂತಹ ಪತ್ರಕರ್ತರನ್ನು ಸರಕಾರ ಮತ್ತು ಸ್ಥಳಿಯರು ಕೂಡ ಗುರುತಿಸಿಕೊಳ್ಳದೆ ಇರುವುದು ನಿಜಕ್ಕೂ ಆತಂಕಕಾರಿಯಾಗಿದೆ.ತನ್ನ ವೃತ್ತಿಯೊಂದಿಗೆ ಸಾಮಾಜಿಕವಾಗಿ ದುಡಿದು ಅತ್ಯಂತ ಕಡಿಮೆ ವೇತನ ಪಡೆಯುವ ಇಂತಹ ಪತ್ರಕರ್ತರನ್ನು ಮೇಲೆತ್ತುವಂತ ಕಾರ್ಯ ಆಗಬೇಕಾಗಿದೆ.ಯಾವುದೇ ಒಂದು ಕಾರ್ಯಕ್ರಮ ಆಗುವಾಗ ಮಾತ್ರ ಆ ಪತ್ರ ಕರ್ತ ನೆನಪಿರುತ್ತಾನೆ ಇದು ಇಂದಿನ ಸ್ಥಿತಿ.ಅಂತದ್ರಲ್ಲೂ ಪುಷ್ಟಗಿರಿ ಪ್ರತಿಷ್ಟಾನ ಇಂತಹ ಪತ್ರಕರ್ತರನ್ನು ಮತ್ತು ಪತ್ರಿಕೆ ವಿತರಕರನ್ನು ಗುರುತಿಸಿರುವುದು ಅಭಿನಾಂನಾರ್ಹ ಎಂದು ಹೇಳಿದರು.
ವಿಚಾರವಾದಿ ಮತ್ತು ಕೃಷಿಕರಾದ ಓಸ್ವಾಲ್ಡ್ ಪಿರೇರಾ ಮಾತನಾಡಿ ಮಾನವನಲ್ಲಿ ಮಾನವೀಯತೆಯ ಗುಣವನ್ನು ಬೆಳೆಸಿಕೊಳ್ಳಬೇಕು.ಬೆಳಿಗ್ಗೆ ಎದ್ದು ಕಾಫಿ ಕುಡಿಯುವ ಸಂದರ್ಭದಲ್ಲಿ ಒಂದು ಪೇಪರ್ ಓದುತ್ತಿದ್ದೇನೆ ಎಂದರೆ ಅದರಲ್ಲಿ ಹಲವಾರು ಜನರ ಪರಿಶ್ರಮವಿದೆ.ಇದರಲ್ಲಿ ಅಡಿಪಾಯವನ್ನು ಯಾರೂ ಕೂಡ ಗುರುತಿಸುವುದೇ ಇಲ್ಲ.ಅದೂ ಮಲೆನಾಡಿನಲ್ಲಿರುವ ಗ್ರಾಮೀಣ ಬಾಗದ ಪತ್ರಕರ್ತ ಮತ್ತು ಪತ್ರಿಕ ವಿತರಕರ ಬದುಕು ನಿಜಕ್ಕೂ ಕಷ್ಟದಾಯಕವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಸುದೀಶ್ ಸುವರ್ಣ ಪತ್ರಿಕಾ ಏಜೆಂಟರ್ ರಾಧಕೃಷ್ಣ, ವಿತರಕರಾದ ವೆಂಕಟೇಶ್, ಪ್ರಸನ್ನ, ಟಿ.ಗಣೇಶ್, ಲಕ್ಷ್ಮಣ, ಗಣೇಶ್ ಎಸ್ ಇವರನ್ನು ಗೌರವಿಸಲಾಯಿತು.
ಈ ಸಂದಭದಲ್ಲಿ ಪುಷ್ಪಗಿರಿ ಸಾಂಕೃತಿಕ ಪ್ರತಿಷ್ಟಾನದ ಸ್ಥಾಪಕ ಅಧ್ಯಕ್ಷ ಡಾ|ಮೋಹನ್ ರಾಜಣ್ಣ, ಅಧ್ಯಕ್ಷೆ ಉಮಾ ಮೋಹನ್, ಉದ್ಯಮಿ ರವಿ ರೈ, ಗಾಯಕ ಬಕ್ಕಿ ಮಂಜುನಾಥ್, ಸುರಭಿ ಜೈನ್, ಗುರುಪ್ರಸಾದ್, ಸಚಿನ್ ಕುಮಾರ್ ಇದ್ದರು.