ಕಳಸ-ಹೊರನಾಡು ಮದ್ಯೆ ಇರುವ ಭದ್ರಾ ನದಿಯ ಹೆಬ್ಬೋಳೆ ಸೇತುವೆ ಸಮೀಪ ಶವವೊಂದು ಕುದುರೆಮುಖ ಕಡೆಯಿಂದ ತೇಲಿಕೊಂಡು ಬರುತ್ತಿರುವುದನ್ನು ಗಮನಿಸಿದ ಸ್ಥಳಿಯರು ಕಳಸ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮೇಲಕೆತ್ತಿದ್ದಾರೆ. ಸುಮಾರು 50 ರಿಂದ 55 ವರ್ಷ ವಯಸ್ಸಿನವಾರಗಿರಬಹುದು. ಮೃತದೇಹವು ಕೊಳೆತು ಹೋಗಿರುವ ಸ್ಥಿತಿಯಲ್ಲಿದ್ದು, ನೀರಿಗೆ ಬಿದ್ದು ಸುಮಾರು 10 ದಿನಗಳಾಗಿರಬಹುದು. ದೇಹದಲ್ಲಿ ಯಾವುದೇ ಗಾಯಗಳು ಕಂಡು ಬಂದಿರುವುದಿಲ್ಲ. ಕಪ್ಪು ಬಣ್ಣದ ಚಡ್ಡಿ ಮತ್ತು ಬನಿಯಾನ್ ಹಾಕಿದ್ದು, ಪ್ರವಾಸಕ್ಕಾಗಿ ಬಂದವರು ಸ್ನಾನಕ್ಕಾಗಿ ಇಳಿದು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ಮಾಡಲಾಗಿದೆ. ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.










