ಕಳಸ : ವ್ಯಾಪಾರ ಮಾಡುವವರಿಗೆ ಕೃಷಿಯ ಸಂಸ್ಕøತಿ ಗೊತ್ತಿಲ್ಲ : ಕಲ್ಕುಳಿ ವಿಠಲ ಹೆಗಡೆ.

153
firstsuddi

ಕಳಸ : ವ್ಯಾಪಾರ ಮಾಡುವವರಿಗೆ ಕೃಷಿಯ ಸಂಸ್ಕøತಿ ಗೊತ್ತಿಲ್ಲ.ಅಂತಹ ಸಂಸ್ಕøತಿ ಹೊಂದಿರುವವರು ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ಪರಿಸರವಾದಿ ಹೋರಾಟಗಾರ ಕಲ್ಕುಳಿ ವಿಠಲ ಹೆಗಡೆ ಹೇಳಿದರು.

ಕುದುರೆಮುಖದಲ್ಲಿ ನಿನ್ನೆ ನಡೆದ ಕುದುರೆಮುಖ ರೈತ ಸಂಘ ಘಟಕದ ಉದ್ಘಾಟನೆ ಮತ್ತು ಬೃಹತ್ ರೈತ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರೈತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದೆ ರೈತರಿಗೆ ಮತ್ತಷ್ಟು ಮಾರಕವಾಗಿರುವ ರೈತ ವಿರೋದಿ ಕಾಯ್ದೆಗಳನ್ನು ಕಳ್ಳಮಾರ್ಗದಲ್ಲಿ ಸುಗ್ರಿವಾಜ್ಞೆಯ ಮುಖಾಂತರ ಜಾರಿಗೆ ತಂದಿದ್ದಾರೆ. ಕೃಷಿ ಹೆಚ್ಚು ಉತ್ಪಾದನೆ ಮತ್ತು ಹೆಚ್ಚು ಲಾಭವನ್ನು ತಂದು ಕೊಡುತ್ತದೆ ಇದನ್ನೇ ಇವತ್ತು ಬಂಡವಾಳ ಶಾಹಿಗಳಿಗೆ ಅನುಕೂಲವಾಗುವಂತೆ ಕಾಯ್ದೆಗಳನ್ನು ತರಲಾಗಿದೆ. ನಮ್ಮ ಬದುಕನ್ನು ಹಂಚಿಕೊಳ್ಳುವವರು ಕೂಲಿ ಕಾರ್ಮಿಕರು. ನಮ್ಮ ಶತ್ರುಗಳು ರಾಜಕೀಯ ನಾಯಕರುಗಳು. ರಾಜಕೀಯ ನಾಯಕರು ಬಡಿದು ತಿನ್ನುವ ಪಕ್ಷದವರು. ಆದ್ದರಿಂದ ದುಡಿದು ತಿನ್ನುವ ಪಕ್ಷ ಒಗ್ಗಟ್ಟಾಗಿ ನಮ್ಮ ಬದುಕಿಗಾಗಿ ಬಡಿದು ತಿನ್ನುವ ಪಕ್ಷದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ದುಗ್ಗಪ್ಪ ಗೌಡ ಮಾತನಾಡಿ ಬಡವ ರೈತ ಕಾರ್ಮಿಕರನ್ನು ಕಡೆಗಣಿಸಿ ಬಂಡವಾಳಶಾಹಿಗಳಿಗೆ ವಿದೇಶಿ ಕಂಪನಿಗಳಿಗೆ ರೈತರನ್ನು ಅಡ ಇಡುತ್ತಿದೆ ಈ ಸರ್ಕಾರ. ರೈತರ ಭೂಮಿಯನ್ನು ಕಿತ್ತುಕೊಂಡು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಲು ಹೊರಟಿದ್ದಾರೆ. ಇವತ್ತು ರೈತರಿಗೆ ಸ್ವಾಭಿಮಾನ ಇದೆ ಎಂದಾದರೆ ಅದು ರೈತ ಸಂಘಟನೆಯಿಂದ ಸಾಧ್ಯವಾಗಿದೆ ಎಂದು ಹೇಳಿದರು.

ಸಮಾವೇಶದ ಬೇಡಿಕೆಗಳು
ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯ ಖಾಯ್ದೆಯನ್ನು ಜಾರಿಗೆ ತರಬೇಕು, ಮಲೆನಾಡಿನ ತೋಟಗಾರಿಕಾ ಬೆಳೆಯಾದ ಕಾಫಿ ಕಾಳುಮೆಣಸು ಏಲಕ್ಕಿ ಇತ್ಯಾದಿ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಅನುಷ್ಠಾನಕ್ಕೆ ತರಬೇಕು. ಕುದುರೆಮುಖ ನಗರ ಪ್ರದೇಶವನ್ನು ಶಿಕ್ಷಣ ವೈದ್ಯಕೀಯ ಪ್ರವಾಸೋದ್ಯಮ ಸಂಸ್ಥೆಗಳನ್ನಾಗಿ ಅಥವಾ ಇನ್ನಿತರೆ ಜನ ಉಪಯೋಗಿ ಕಾರ್ಯಗಳಿಗೆ ಬಳಸಿಕೊಳ್ಳಲು ಕ್ರಮ ವಹಿಸಿಕೊಳ್ಳಬೇಕು. ನೆಲ್ಲಿಬೀಡಿನಲ್ಲಿ ಭದ್ರಾ ನದಿಗೆ ಸರ್ಕಾರವು ಸೇತುವೆ ನಿರ್ಮಿಸಿಕೊಡಬೇಕು. ನಗರಗಳಲ್ಲಿ ವಾಸಿಸುವ ಪರಿಸರವಾದಿಗಳು ವಿದೇಶದಿಂದ ಹಣ ಪಡೆದು ಗ್ರಾಮೀಣ ಪ್ರದೇಶಗಳಿಗೆ ಪರಿಸರದ ಹೆಸರಿನಲ್ಲಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಶಿಕ್ಷಕರ ಕೊರತೆಯನ್ನು ಸರಿಪಡಿಸಿ ಅನರ್ಹ ಶಿಕ್ಷಕರನ್ನು ವಜಾಗೊಳಿಸಿ ಅರ್ಹ ಶಿಕ್ಷಕರ ಆಯ್ಕೆಯನ್ನು ಮಾಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು ರೈತರ ಮೇಲೆ ದಾಖಲಿಸಿರುವ ಎಲ್ಲಾ ಸುಳ್ಳು ಪ್ರಕರಣಗಳನ್ನು ವಾಪಾಸು ಪಡೆಯಬೇಕು.ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಎಲ್ಲಾ ರೈತರ ಮೂಲಭೂತ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ತಡೆಯೊಡ್ಡುವುದನ್ನು ನಿಲ್ಲಿಸಬೇಕು.ಅರಣ್ಯ ಹಕ್ಕು ಪತ್ರವನ್ನು ನೀಡಿರುವ ಎಲ್ಲಾ ಆದಿವಾಸಿಗಳಿಗೆ ಪಟ್ಟಾ ಮತ್ತು ಪಹಣಿ ಪತ್ರವನ್ನು ನೀಡಬೇಕು. ಅರಣ್ಯ ಮತ್ತು ಇತರೆ ಪಾರಂಪಾರಿಕಾ ಅರಣ್ಯ ವಾಸಿಗಳ ಖಾಯಿದೆಯಲ್ಲಿ ತಿಳಿಸಿರುವಂತೆ ಇತರೆ ಪಾರಂಪಾರಿಕ ಅರಣ್ಯ ವಾಸಿಗಳಿಗೆ ವಿಧಿಸಿರುವ 75 ವರ್ಷದ ಅನುಭವವನ್ನು 25 ವರ್ಷಕ್ಕೆ ಮಾರ್ಪಡಿಸಬೇಕು. ಕಸ್ತೂರಿ ರಂಗನ್ ವರದಿ ಜಾರಿ ಮತ್ತು ಜನವಸತಿ ಪ್ರದೇಶಗಳನ್ನು ಸೂಕ್ಷ್ಮ ವಲಯ ಎಂದು ಘೋಷಿಸುವುದನ್ನು ರದ್ದುಪಡಿಸಬೇಕು. ರೈತರು ಕೃಷಿ ಮಾಡಿರುವ ಎಲ್ಲಾ ಜಮೀನುಗಳನ್ನು ಕಂದಾಯ ಭೂಮಿಗಳನ್ನಾಗಿ ಪರಿವರ್ತಿಸಬೇಕು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುದುರೆಮುಖ ರೈತ ಸಂಘ ಘಟಕದ ಅಧ್ಯಕ್ಷ ಸುರೇಶ್ ಭಟ್ ವಹಿಸಿದರು.ಕಡೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ನಿರಂಜನ ಮೂರ್ತಿ, ವಕೀಲರಾದ ಹೂವಪ್ಪ, ಸಂಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೇಯಂಸ ಕುಮಾರ್, ಜನಶಕ್ತಿ ಸಂಘಟನೆ ಹೋರಾಟಗಾರ ವಾಸು, ಜಿಲ್ಲಾ ಆದಿವಾಸಿ ಗಿರಿಜನ ಹಿತರಕ್ಷಣಾ ಸಮಿತಿ ಸಂಚಾಲಕ ಮರಿಯಪ್ಪ, ಹೋರಾಟಗಾರ ಹಾಗಲಗಂಡಿ ವೆಂಕಟೇಶ, ಕಳಸ ರೈತ ಸಂಘದ ಕಾರ್ಯಕರ್ತ ಸವಿಂಜಯ, ವಕೀಲ ಅನಂತೇಶ್ ಇತರರು ಇದ್ದರು.