ಕಿನ್ನಿಗೋಳಿ: ಹಾಡಹಗಲೇ ದಂಪತಿಯ ಬರ್ಬರ ಹತ್ಯೆ- ಆರೋಪಿ ಬಂಧನ…

982
firstsuddi

ಮಂಗಳೂರು: ಹಾಡಹಗಲೇ ದಂಪತಿಯ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಏಳಿಂಜೆ ಎಂಬಲ್ಲಿ ನಡೆದಿದೆ. ಮೃತರನ್ನು ಕಿನ್ನಿಗೋಳಿ ಏಳಿಂಜೆ ನಿವಾಸಿ ವಿನ್ಸೆಂಟ್ ಡಿಸೋಜಾ (48) ಮತ್ತು ಹೆಲೆನ್ ಡಿಸೋಜಾ (43) ಎಂದು ಗುರುತಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ಪಕ್ಕದ ಮನೆಯ ಆಲ್ಫೋನ್ಸ್ ಸಲ್ಡಾನಾ (51) ಎಂಬವರು ವಿನ್ಸೆಂಟ್ ಮತ್ತು ಹೆಲೆನ್ ಅವರಿಗೆ ಗಂಭೀರವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಆಲ್ಫೋನ್ಸ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿದ್ದಾರೆ