ಶಿವಮೊಗ್ಗ : ಕುಡಿದ ಮತ್ತಿನಲ್ಲಿ ಪಾಪಿ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಬುಳ್ಳಾಪುರದಲ್ಲಿ ನಡೆದಿದೆ.
ಬುಳ್ಳಾಪುರದ ನಿವಾಸಿ ವನಜಾಕ್ಷಿ (45) ಮೃತ ತಾಯಿ. ದೇವರಾಜ ನಾಯ್ಕ(27) ಕುಡಿದ ಮತ್ತಿನಲ್ಲಿ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಪ್ರತಿದಿನ ಕುಡಿದು ಬಂದು ತನ್ನ ತಂದೆ ಲೋಕೇಶ್ ನಾಯ್ಕ, ತಾಯಿ ವನಜಾಕ್ಷಿ ಜೊತೆ ಜಗಳವಾಡುತ್ತಿದ್ದನು. ಸೋಮವಾರ ರಾತ್ರಿ ಸಹ ಎಂದಿನಂತೆ ಕುಡಿದು ಬಂದು ತಾಯಿ ವನಜಾಕ್ಷಿ ಬಾಯಿ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾನೆ. ಈ ವೇಳೆ ತನ್ನ ತಾಯಿಯ ಕಪಾಳಕ್ಕೆ ಹೊಡೆದಿದ್ದಾನೆ. ಕಪಾಳಕ್ಕೆ ಹೊಡೆಯುತ್ತಿದ್ದಂತೆ ತಾಯಿ ನೆಲಕ್ಕೆ ಬಿದ್ದಿದ್ದಾಳೆ. ಆದರೂ ಬಿಡದ ಪಾಪಿ ಪುತ್ರ ತಾಯಿಯ ಕುತ್ತಿಗೆಯನ್ನು ಕಾಲಲ್ಲಿ ತುಳಿದಿದ್ದಾನೆ. ಪರಿಣಾಮ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಈ ಕುರಿತು ಮಗನ ವಿರುದ್ಧ ಲೋಕೇಶ್ ನಾಯ್ಕ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ದೇವರಾಜನನ್ನು ವಶಕ್ಕೆ ಪಡೆದಿದ್ದಾರೆ.










