‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’ ಹಾಡಿಗೆ ದಾವಣಗೆರೆ ತಹಶೀಲ್ದಾರ್ ಭರ್ಜರಿ ಸ್ಟೆಪ್…

79
firstsuddi

ದಾವಣಗೆರೆ : ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’ ಹಾಡಿಗೆ ದಾವಣಗೆರೆ ತಹಶೀಲ್ದಾರ್ ಭರ್ಜರಿ ಸ್ಟೆಪ್ ಹಾಕಿದ್ದಾರೆ.

ದಾವಣಗೆರೆ ತಾಲ್ಲೂಕಿನ ತುರ್ಚಘಟ್ಟ ಬಳಿ ಇರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ತಹಶೀಲ್ದಾರ್ ಗಿರೀಶ್ ಗಣಪತಿ ಪ್ರತಿಷ್ಠಾಪನೆ ಮಾಡಿದ್ದರು. ಈ ಕೇಂದ್ರದಲ್ಲಿ ಭಿಕ್ಷೇ ಬೇಡುವವರು, ಯಾರು ಇಲ್ಲದ ಅನಾಥರು ಇದ್ದು, ನಿರಾಶ್ರಿತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಗಣಪತಿ ವಿಸರ್ಜನೆ ಹಿನ್ನಲೆ ಹಲವು ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ನಿರಾಶ್ರಿತರ ಜೊತೆ ಹಾಡಿಗೆ ಕುಣಿದು ತಹಶೀಲ್ದಾರ್ ಗಿರೀಶ್ ಸಂಭ್ರಮಿಸಿದ್ದಾರೆ.

ಮೂರು ದಿನಗಳ ಕಾಲ ಪ್ರತಿಷ್ಠಾಪನೆ ಮಾಡಿದ್ದ ಗಣಪತಿಯನ್ನು ಇಂದು ವಿಸರ್ಜನೆ ಮಾಡಿದ್ದು, ಈ ವೇಳೆ ತಹಶೀಲ್ದಾರ್ ಗಿರೀಶ್ ಜೊತೆ ನಿರಾಶ್ರಿತರು, ಸಿಬ್ಬಂದಿಗಳು ಕೂಡ ನೃತ್ಯ ಮಾಡಿದ್ದಾರೆ. ಒಟ್ಟಾರೆ ನಿರಾಶ್ರಿತರೊಂದಿಗೆ ತಹಶೀಲ್ದಾರ್ ಗಿರೀಶ್ ಗಣಪತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.