ಮಂಡ್ಯ : ಕೆಆರ್ ಎಸ್ ಡ್ಯಾಂ ಬಳಿ 30ಕ್ಕೂ ಹೆಚ್ಚು ಕಲ್ಲು ಕುಸಿತಗೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಡ್ಯಾಂನಿಂದ ಬೃಂದಾವನ ಹಾಗೂ ಕಾವೇರಿ ಪ್ರತಿಮೆಗೆ ತೆರಳುವ ರಸ್ತೆಯಾಗಿದ್ದು, ರಸ್ತೆಯ ತಳಹದಿಗೆ ಕಲ್ಲುಗಳನ್ನು ಅಳವಡಿಸಿಲಾಗಿತ್ತು. ರಾತ್ರಿ ಸುರಿದ ಭಾರಿ ಮಳೆ ಹಿನ್ನೆಲೆ ಕಲ್ಲುಗಳು ಕುಸಿದು ಬಿದ್ದಿವೆ. ಡ್ಯಾಂ ಬಿರುಕು ವಿವಾದದ ಬೆನ್ನಲ್ಲೇ ಕಲ್ಲು ಕುಸಿತದಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ ಡ್ಯಾಂನಲ್ಲಿ ಇಷ್ಟೊಂದು ಪ್ರಮಾಣದ ಕಲ್ಲುಗಳು ಕುಸಿದಿವೆ ಎನ್ನಲಾಗ್ತಿದೆ.
ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ನಿಗಮದ ಅಧಿಕಾರಿಗಳು, ಯಾರೂ ಆತಂಕಪಡುವ ಆತಂಕವಿಲ್ಲ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರ ನಡುವೆಯೇ ಡ್ಯಾಂನಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿರೋದರಿಂದ ಕಲ್ಲುಗಳು ಕುಸಿದಿವೆ ಎಂದು ಸ್ಪಷ್ಟಪಡಿಸಿದ್ದಾರೆ.










