ಕೊಡಗು ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ನೆಲೆ ಕಳೆದುಕೊಂಡಿರುವ ಕುಟುಂಬಗಳಿಗೆ ಕುದುರೆಮುಖದಲ್ಲಿ ಪುನರ್ವಸತಿಯನ್ನು ನೀಡಿ…

415

ಕಳಸ:ಕೊಡಗು ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ನೆಲೆ ಕಳೆದುಕೊಂಡಿರುವ ಕುಟುಂಬಗಳಿಗೆ ಕುದುರೆಮುಖದಲ್ಲಿ ಪುನರ್ವಸತಿಯನ್ನು ನೀಡಿ ಎಂದು ನೆಲ್ಲಿಬೀಡು ಜ್ಯೋತಿ ಯುವಕ ಸಂಘ ಕೇಳಿಕೊಂಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಮನೋಜ್ ಕೊಡಗಿನಲ್ಲಿ ನೆರೆ ಹಾವಳಿಯಿಂದ ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿದ್ದಾರೆ.ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹಲವಾರು ವರ್ಷಗಳೇ ಬೇಕಾಗಬಹುದು.ಈ ನಿಟ್ಟಿನಲ್ಲಿ ಕುದುರೆಮುಖದಲ್ಲಿ ಕಬ್ಬಿನದ ಅದಿರು ಒಡೆತನದ ನೂರಾರು ಎಕರೆ ಕಂದಾಯ ಭೂಮಿ ಇದೆ.ಇದರಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿವೆ.ಆಸ್ಪತ್ರೆ,ಶಾಲೆ,ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಬ್ಯಗಳು ಎಲ್ಲವೂ ಇದೆ.ಇವೆಲ್ಲವೂ ಪಾಳು ಬಿದ್ದು ಹೋಗುತ್ತಿದೆ.ಇದನ್ನು ಮನೆ ಮಠಗಳನ್ನು ಕಳೆದು ಕೊಂಡು ನಿರಾಶ್ರಿತರಾದವರಿಗೆ ಇದನ್ನು ನೀಡಿದರೆ ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಬಹುದು.ಈ ಬಗ್ಗೆ ಸರ್ಕಾರ ಗಂಬೀರ ಚಿಂತನೆ ನಡೆಸಿ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಕೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಸುದನ್ವ,ದೇವರಾಜು,ರಾಜೇಂದ್ರ,ಚೇತನ್ ಇದ್ದರು.