ಕೊಲೆ ಮಾಡಿದ್ದು ಮುಸ್ಲಿಂ ಗೂಂಡಾಗಳು ಅಂತ ಹೇಳಿದ್ದೆ, ಈಗ ಅದು ಸತ್ಯ ಆಗಿದೆ : ಸಚಿವ ಈಶ್ವರಪ್ಪ.

75
firstsuddi

ಬೆಂಗಳೂರು : ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷನನ್ನು ಕೊಲೆ ಮಾಡಿದ್ದು ಮುಸ್ಲಿಂ ಗೂಂಡಾಗಳು ಅಂತ ಹೇಳಿದ್ದೆ. ಈಗ ಅದು ಸತ್ಯ ಆಗಿದೆ. ಈಗಲಾದರೂ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರು ನನ್ನ ಆರೋಪವನ್ನು ಒಪ್ಪುತ್ತಾರಾ ಎಂದು ಸಚಿವ ಕೆಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹರ್ಷ ಕೊಲೆ ಮಾಡಿರುವವರು ಮುಸ್ಲಿಂ ಗೂಂಡಾಗಳು ಅಂತ ನಾನು ಹೇಳಿದ್ದೆ. ನಾನು ನಿನ್ನೆ ಎಸ್ ಪಿ ಬಳಿ ಮಾಹಿತಿ ಪಡೆದು ಹೇಳಿಕೆ ಕೊಟ್ಟಿದ್ದೆ. ಬಂಧನ ಆದವರೆಲ್ಲಾ ಮುಸ್ಲಿಮರು. ಈಗಲಾದರೂ ಬಿ.ಕೆ ಹರಿಪ್ರಸಾದ್ ನನ್ನ ಆರೋಪವನ್ನು ಒಪ್ಕೊತಾರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರ ಕಗ್ಗೊಲೆ ಆಗಿತ್ತು. ಕಾಂಗ್ರೆಸ್ ಸರ್ಕಾರ ಇದ್ದಾಗ ಗೋ ರಕ್ಷಣೆ ಮಾಡುವ ಹಿಂದೂ ಹುಡುಗರನ್ನು ಕೊಲೆ ಮಾಡ್ತಾ ಇದ್ದರು. ಈಗ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಅಂತ ಹಿಂದೂ ಯುವಕರ ಕೊಲೆ ಮಾಡುತ್ತಿದ್ದಾರೆ. ಹೀಗಾಗಿ ನಾನು ಎನ್ ಐಎ ತನಿಖೆಗೆ ಒತ್ತಾಯ ಮಾಡ್ತೀನಿ. ಸಿಎಂ ಬಳಿ ಎನ್ ಐಎ ತನಿಖೆಗೆ ಮನವಿ ಮಾಡ್ತಿನಿ ಎಂದು ಈಶ್ವರಪ್ಪ ತಿಳಿಸಿದರು.