ಕೋಮುವಾದಿ ಪಕ್ಷ ದೂರ ಇಡಲು ಕಾಂಗ್ರೆಸ್ ನಮ್ಮನ್ನು ಬೆಂಬಲಿಸಲಿ : ರೇವಣ್ಣ.

61
firstsuddi

ಬೆಂಗಳೂರು : ಕೋಮುವಾದಿ ಪಕ್ಷವನ್ನು ದೂರ ಇಡಲು ಕಾಂಗ್ರೆಸ್ ನಮ್ಮನ್ನು ಬೆಂಬಲಿಸಬೇಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಮನವಿ ಮಾಡಿದರು.

ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿ ಬೆಂಬಲಿಸಲು ಸೋನಿಯಾಗಾಂಧಿ ಜೊತೆ ಚರ್ಚೆ ಮಾಡಿದ್ದೇವೆ. ಕುಪೇಂದ್ರ ರೆಡ್ಡಿ ಕೂಡ ಡಿಕೆಶಿ ಅವರನ್ನ ಭೇಟಿ ಮಾಡಿದ್ದಾರೆ. ರಾಮಲಿಂಗಾರೆಡ್ಡಿ ಎಲ್ಲರನ್ನೂ ಭೇಟಿ ಮಾಡಿದ್ದರು. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿದ್ದೇವೆ ಎಂದರು.

ನಮ್ಮ ಬಳಿ 32 ವೋಟ್ ಇದೆ. ಈಗ ಮೊದಲ ಪ್ರಾಶಸ್ತ್ಯ 32 ಇದೆ. ಎರಡೂ ರಾಷ್ಟ್ರೀಯ ಪಕ್ಷ ಇದೆ. ಅದರಲ್ಲಿ ಒಂದು ಕೋಮುವಾದಿ ಪಕ್ಷವಾದರೆ ಮತ್ತೊಂದು ಕೋಮುವಾದ ವಿರುದ್ಧ ಇರುವ ರಾಷ್ಟ್ರೀಯ ಪಕ್ಷವಾಗಿದೆ ಎಂದು ತಿಳಿಸಿದರು.

ದೇವೇಗೌಡರೇ ಸೋನಿಯಾ ಗಾಂಧಿ ಜೊತೆ ಮಾತನಾಡಿದ್ರು. ಆದರೆ, ಏಕಾಏಕಿ ಅವರು ನಿನ್ನೆ ಮತ್ತೊಬ್ಬ ಅಭ್ಯರ್ಥಿಯನ್ನು ಹಾಕಿದ್ದಾರೆ. ಕೋಮುವಾದಿ ಪಕ್ಷ ದೂರ ಇಡಲು ಕಾಂಗ್ರೆಸ್ ನಮಗೆ ಸಹಕಾರ ನೀಡಲಿ. ಈಗಲೂ ನಾವು ಸೋನಿಯಾ, ಖರ್ಗೆ, ಸಿದ್ದರಾಮಯ್ಯ, ಡಿಕೆಶಿ, ವೇಣುಗೋಪಾಲ್ ರಿಗೆ ಮನವಿ ಮಾಡ್ತೇವೆ. ಜೆಡಿಎಸ್ ಪ್ರಾದೇಶಿಕ ಪಕ್ಷ, ಕಾಂಗ್ರೆಸ್ ಸಹಕಾರ ನೀಡಬೇಕು ಎಂದು ಹೇಳಿದರು.