ಕೋಲಾರ : ರೆಸಾರ್ಟ್ ಸೇರಿರುವ ಶಾಸಕರು ಒಂದೆಡೆಯಾದರೆ ಅತೃಪ್ತ ಶಾಸಕರ ರಾಜೀನಾಮೆ ವಿಷಯದಲ್ಲಿ ದೇಶವ್ಯಾಪ್ತಿ ಸುದ್ದಿಯಾಗಿರುವ ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ಕ್ಷೇತ್ರದ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿದರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗೆ ಸೂಕ್ತ ವೈದ್ಯಕೀಯ ಉಪಕರಣಗಳನ್ನು ನೀಡಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ವಿರುದ್ಧ ಕೆಂಡಾಮಂಡಲರಾದರು. ನೀವೆಲ್ಲಾ ಸ್ಕೌಂಡ್ರಲ್ಸ್ ನಿಮಗೆಲ್ಲಾ ಮಾನವೀಯತೆ ಇದೆಯಾ? ಬಡತನದ ಬಗ್ಗೆ ಗೊತ್ತಿದೆಯಾ? ಬಡ ರೋಗಿಯ ಉಪಯೋಗಕ್ಕೆ ಬೇಕಾಗುವ ಉಪಕರಣಗಳನ್ನು ಕೊಡಲು ಯಾಕೆ ಹಿಂದೇಟು ಹಾಕುತ್ತೀರ ಎಂದು ಜಿಲ್ಲಾ ವೈದ್ಯಾಧಿಕಾರಿಯನ್ನು ತರಾಟಗೆ ತೆಗೆದುಕೊಂಡಿದ್ದಾರೆ.










