ಕ್ಷುಲ್ಲಕ ಕಾರಣ : ಯುವಕನ ಬರ್ಬರ ಹತ್ಯೆ…

91
firstsuddi

ಹಾಸನ : ಕ್ಷುಲ್ಲಕ ಕಾರಣಕ್ಕೆ ಯುವಕನನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಸಕಲೇಶಪುರ ಪಟ್ಟಣದ ಅಜಾದ್ ರಸ್ತೆಯಲ್ಲಿ ನಿನ್ನೆ ನಡೆದಿದೆ. ಅಪ್ಸರ್ ಪಾಷಾ (27) ಮೃತ ದುರ್ದೈವಿ.

ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಹಾಜಿ ಖುರೇಷಿ ಕುಟುಂಬದವರು ಹಸುಗಳ ಮಾಂಸ ಸ್ವಚ್ಛ ಮಾಡಿದ ನೀರನ್ನು ಚರಂಡಿಯಲ್ಲಿ ಹರಿ ಬಿಡುತ್ತಿದ್ದರು. ಇದು ಅಪ್ಸರ್ ಮನೆಯ ಮುಂದೆ ನಿಲ್ಲುತ್ತಿದ್ದ ಕಾರಣ ವಿಪರೀತ ದುರ್ವಾಸನೆ ಬೀರುತ್ತಿತ್ತು. ಇದೇ ವಿಚಾರವಾಗಿ ಅಪ್ಸರ್ ಹಾಗೂ ಹಾಜಿ ಖುರೇಷಿ ಕುಟುಂಬಗಳ ನಡುವೆ ಜಗಳ ಆಗಿದೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಹಾಜಿ ಖುರೇಷಿ ಗ್ಯಾಂಗಿನ ಏಸಾನ್ ಖುರೇಷಿ ಎಂಬಾತ ಚೂರಿಯಿಂದ ಅಪ್ಸರ್ ಪಾಷಾ ಹೊಟ್ಟೆಗೆ ಇರಿದಿದ್ದಾನೆ. ತಕ್ಷಣ ಗಾಯಗೊಂಡ ಅಪ್ಸರ್ ಅವರನ್ನು ಕ್ರಾಪರ್ಡ್ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದುಕೊಂದು ಹೋಗಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆದಲ್ಲಿಯೇ ಅಪ್ಸರ್ ಸಾವನ್ನಪ್ಪಿದ್ದಾರೆ.

ಯುವಕರು ಹೊಡೆದಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಕ್ಯಾಮರಾ ದೃಶ್ಯ ಆದರಿಸಿ ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.