ಬೆಂಗಳೂರು : ಒಂದು ವರ್ಗಾವಣೆ ವಿಚಾರವಾಗಿ ಇಬ್ಬರು ಸಚಿವರ ನಡುವೆ ವಾಕ್ಸಮರ ನಡೆದಿದೆ. ತಹಶೀಲ್ದಾರ್ ವರ್ಗಾವಣೆ ವಿಚಾರವಾಗಿ ವಿಧಾನಸಭೆ ಲಾಂಜ್ ನಲ್ಲಿ ನಿನ್ನೆ ಸಚಿವರಾದ ಆರ್. ಅಶೋಕ್, ಡಾ. ಅಶ್ವತ್ಥ್ ನಾರಾಯಣ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ರಾಮನಗರ ಜಿಲ್ಲೆಯ ತಹಶೀಲ್ದಾರ್ ಶ್ರೀನಿವಾಸ್ ವರ್ಗಾವಣೆ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಗೆ ಸಚಿವ ಡಾ.ಅಶ್ವತ್ಥ್ ನಾರಾಯಣ ಅವರು ಪತ್ರದ ಮೂಲಕ ಮನವಿ ಮಾಡಿದ್ದರು. ಈ ಸಂಬಂಧ ಆರ್. ಅಶೋಕ್ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ನಿನ್ನೆ ನೇರವಾಗಿ ಭೇಟಿಯಾಗಿ ಆರ್.ಅಶೋಕ್ ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ, ಅಶ್ವತ್ಥ್ ನಾರಾಯಣ ಮನವಿಯನ್ನು ಅಶೋಕ್ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.
ಆತ ಬಿಜೆಪಿ ಪಕ್ಷದ ಹಿರಿಯ ನಾಯಕರೊಬ್ಬರು ಹಾಕಿಸಿರುವ ತಹಶೀಲ್ದಾರ್, ವರ್ಗಾವಣೆ ಸಾಧ್ಯವಿಲ್ಲ ಅಂತಾ ಅಶೋಕ್ ಹೇಳುತ್ತಿದ್ದಾರಂತೆ. ಈ ವೇಳೆ ನಾನು ರಾಮನಗರ ಜಿಲ್ಲೆ ಉಸ್ತುವಾರಿ ಸಚಿವ, ನಾನು ಕೇಳಿದ್ರೂ ವರ್ಗಾವಣೆ ಮಾಡಲ್ಲ ಅಂದ್ರೆ ಹೇಗೆ…? ಅಂತಾ ಅಶ್ವಥ್ ನಾರಾಯಣ್ ಸಿಟ್ಟು ಪ್ರದರ್ಶನ ಮಾಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.










