ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ…

899
firstsuddi

ಮೈಸೂರು : ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಹಾಗೂ ಗಾಯಕ ಚಂದನ್ ಶೆಟ್ಟಿ ಅವರ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿತು. ಈ ಶುಭ ಸಮಾರಂಭದಲ್ಲಿ ಎರಡು ಕುಟುಂಬ ಮತ್ತು ಆಪ್ತ ಸ್ನೇಹಿತರಿಗೆ ಅಷ್ಟೇ ಆಹ್ವಾನಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಪರಿಚಯವಾದ ನಿವೇದಿತಾ ಹಾಗೂ ಚಂದನ್ ನಡುವಿನ ಒಡನಾಟದ ಬಗ್ಗೆ ಹಲವು ತಿಂಗಳಿಂದ ಅವರು ಇಬ್ಬರು ವಿವಾಹವಾಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಅದಕ್ಕೆ ಪೂರಕವೆಂಬಂತೆ ಮೈಸೂರು ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ರಿಂಗ್ ತೊಡಿಸುವ ಮೂಲಕ ತಮ್ಮ ಪ್ರೇಮ ನಿವೇದನೆಯನ್ನು ತಿಳಿಸಿದ್ದರು. ಇದಕ್ಕೆ ರಾಜ್ಯಾಧ್ಯಂತ ವಿರೋಧವು ವ್ಯಕ್ತವಾಗಿತ್ತು.